Friday, August 21, 2026

BDA Apartments

Home Front Page ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ:  ಕಪ್ಪು ಟೀ ಶರ್ಟ್ ಧರಿಸಿ BJP-JDS ಶಾಸಕರ ಪ್ರತಿಭಟನೆ

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ:  ಕಪ್ಪು ಟೀ ಶರ್ಟ್ ಧರಿಸಿ BJP-JDS ಶಾಸಕರ ಪ್ರತಿಭಟನೆ

ಬೆಂಗಳೂರು,ಆಗಸ್ಟ್,21,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು ಕಪ್ಪು ಟೀಶರ್ಟ್ ಧರಿಸಿ ಪ್ರತಿಭಟನೆ ನಡೆಸಿದರು.

ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ವಿಧಾನಸೌಧದವರೆಗೆ ಪಾದಯಾತ್ರೆ ಬಂದು ಶಾಸಕರ ಭವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆ ಎದುರು ಧರಣಿ ನಡೆಸಿದರು.

ಕಪ್ಪು ಟೀ ಶರ್ಟ್ ಧರಿಸಿ ಟೀಶರ್ಟ್ ಮೇಲೆ ನಾಗೇಂದ್ರ ರಾಜೀನಾಮೆ ನೀಡಲಿ ಎಂದು ಬರೆದುಕೊಂಡು ಆಕ್ರೋಶ  ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ  ಹೊರ ಹಾಕಿದರು. ಕಪ್ಪು ಟೀಶರ್ಟ್ ಧರಿಸಿ ಆಗಮಿಸಿದ ಹಿನ್ನೆಲೆಯಲ್ಲಿ ಶಾಸಕರನ್ನ ಮಾರ್ಷಲ್ ಗಳು ತಡೆದ ಘಟನೆ ನಡೆಯಿತು.

Key words: B. Nagendra,  resignation, BJP-JDS, MLAs, protest, black T-shirts