‘’ಬಿ.ಎಡ್ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ’’ : ಮೈಸೂರು ವಿವಿ

ಮೈಸೂರು,ಜನವರಿ,02,2021(www.justkannada.in) :  ಜನವರಿಯಲ್ಲಿ ನಡೆಯಲಿರುವ 2ನೇ ಮತ್ತು 4ನೇ ಸೆಮಿಸ್ಟರ್ ಬಿ.ಎಡ್.ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಿ ಮೈಸೂರು ವಿವಿ ಆದೇಶ ಹೊರಡಿಸಿದೆ.jk-logo-justkannada-mysore2019-20ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ, ಸ್ನಾತಕೋತ್ತರ Intermediate Semester ಪರೀಕ್ಷಾ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ ನ ಪರೀಕ್ಷಾ ಶುಲ್ಕಕ್ಕೆ ಶೇಕಡ 50%ರನ್ನು ರಿಯಾಯಿತಿ ನೀಡಲು ಆದೇಶಿಸಿರುವ ಹಿನ್ನೆಲೆಯಲ್ಲಿ, ಈಗಾಗಲೇ, ಹೊರಡಿಸಿರುವ ಅಧಿಸೂಚನೆಯಲ್ಲಿನ ಪರೀಕ್ಷಾ ಶುಲ್ಕಕ್ಕೆ ರಿಯಾಯಿತಿಯನ್ನು ಕೆಳಕಂಡಂತೆ ನೀಡಲಾಗಿದೆ.

ಈ ಶುಲ್ಕ ಇದೊಂದು ಬಾರಿ ಮಾತ್ರ ಅನ್ವಯಾಗಲಿದೆ…! 

B.Ed-Test-fee-50 percent-discount-Mysore VV

ಪೂರ್ಣ ಪರೀಕ್ಷೆಗೆ 1300 ರೂ. ಶುಲ್ಕ ನಿಗಧಿಪಡಿಸಿದ್ದು, ರಿಯಾಯಿತಿ ಬಳಿಕ 650 ರೂ. ಹಾಗೂ ಒಂದು ವಿಷಯಕ್ಕೆ (ಪ್ರಾಯೋಗಿಕ ಪರೀಕ್ಷೆಯೊಂದಿಗೆ) 770 ರೂ. ಇದ್ದು, ರಿಯಾಯಿತಿ ಬಳಿಕ 385 ರೂ. ಒಂದು ವಿಷಯಕ್ಕೆ(ಪ್ರಾಯೋಗಿಕ ಪರೀಕ್ಷೆ ಇಲ್ಲದಿರುವ) 440 ರೂ. ಶುಲ್ಕವಿದ್ದು, ರಿಯಾಯಿತಿ ನಂತರ 220ಕ್ಕೆ ಇಳಿಸಲಾಗಿದೆ. ಅಂಕಪಟ್ಟಿ ಶುಲ್ಕ 320 ರೂ. ಇದ್ದು ಇದಕ್ಕೆ ರಿಯಾಯಿತಿ ನೀಡಿಲ್ಲ.December.9-Seminar-Mysore VV-Physical- Education-Division

ಹೊಸದಾಗಿ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ(Freshers only) ಮಾತ್ರ ಅನ್ವಯವಾಗಲಿದ್ದು, ಅನುತ್ತೀರ್ಣಗೊಂಡ(Repeaters) ವಿದ್ಯಾರ್ಥಿಗಳಿಗೆ ಈ ರಿಯಾಯಿತಿಯು ಅನ್ವಯವಾಗುವುದಿಲ್ಲ. ಈಗಾಗಲೇ ವಿದ್ಯಾರ್ಥಿಗಳಿಂದ ಪೂರ್ಣ ಪ್ರಮಾಣದ ಪರೀಕ್ಷಾ ಶುಲ್ಕ ಸಂಗ್ರಹಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕವನ್ನು ಹಿಂದಿರುಗಿಸಲು ಸಂಬಂಧಪಟ್ಟ ಕಾಲೇಜುಗಳ ಮುಖ್ಯಸ್ಥರುಗಳು ಕ್ರಮಕೈಗೊಳ್ಳಬೇಕು ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

key words : B.Ed-Test-fee-50 percent-discount-
Mysore VV