
ಮೈಸೂರು, ಮೇ.೦೧,೨೦೨೫: ಹಫ್ತಾ ವಸೂಲಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಮಾದೇಶ ಸಹಾಯಕ ನಾಗುವನ್ನು ವಶಕ್ಕೆ ಪಡೆದ ಪೊಲೀಸರು.
ಇಂಜಿನಿಯರ್ ಕೃಷ್ಣ ಕಾಮಿರೆಡ್ಡಿ ಎಂಬುವವರು ನಗರದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28ರಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಾದೇಶ ಹಾಗೂ ನಾಗು ವಿರುದ್ಧ ಬಿಎನ್ಎಸ್ನ ಸೆಕ್ಷನ್ 308 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣದ ಎ-೨ ನಾಗುವನ್ನು ವಿಚಾರಣೆಗೆಂದು ವಶಕ್ಕೆ ಪಡೆದಿರುವ ಪೊಲೀಸರು, ಕೋರ್ಟ್ ರಜವಿರುವ ಕಾರಣ, ನಾಳೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆಯುವರು ಎಂದು ಮೂಲಗಳು ತಿಳಿಸಿವೆ.
ಎಫ್ಐಆರ್ ಪ್ರಕಾರ, ಇಂಜಿನಿಯರ್ ಕೃಷ್ಣ ಕಾಮಿರೆಡ್ಡಿ, ಒಂಟಿಕೊಪ್ಪಲಿನ ಕಾಫಿ ಶಾಪ್ನ ಫ್ರ್ಯಾಂಚೈಸ್ ಪಡೆದಿದ್ದು ಅದರ ರಿನೋವೇಷನ್ ಕಾರ್ಯ ನಡೆಸುತ್ತಿದ್ದರು. ಈ ನಡುವೆ ಜನವರಿ 24 ರಂದು ನಾಗು ಎಂಬಾತ ಕಟ್ಟಡದ ಸ್ಥಳಕ್ಕೆ ಬಂದು 5 ಲಕ್ಷ ರೂ.ಗೆ ಬೇಡಿಕೆ ಇಟ್ಟ. ಆಗ ಇದಕ್ಕಾಗಿ ಕಾಲಾವಕಾಶ ಕೇಳಿದೆ. ನಂತರ, ಫೆಬ್ರವರಿ ಮಧ್ಯದ ವೇಳೆಗೆ, ನಾಗು ಜತೆ ಮಾತನಾಡುವಾಗ ಮಾದೇಶ ದೂರವಾಣಿಯಲ್ಲಿ ಮಾತನಾಡಿ ದೂರುದಾರ ಕಾಮಿರೆಡ್ಡಿಯನ್ನು ಅವರ ಸ್ಥಳಕ್ಕೆ ಬರಲು ಹೇಳಿದರು. ಆಗ ಕಟ್ಟಡದ ರಿಪೇರಿ ಕೆಲಸ ಸ್ಥಗಿತಗೊಳಿಸಿದೆ. ಆದರೆ ನಾಗು ಪದೇ ಪದೇ ದೂರುವಾಣಿ ಮೂಲಕ ನನ್ನನ್ನು ಕರೆಯುತ್ತಲೇ ಇದ್ದನು. ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಕೃಷ್ಣ ದೂರು ನೀಡಲು ಪೊಲೀಸ್ ಠಾಣೆ ಸಂಪರ್ಕಿಸಿದರು.
ಎಫ್ಐಆರ್ನಲ್ಲಿ ಮಾದೇಶ:

ರೌಡಿಪಟ್ಟಿಯಲ್ಲಿರುವ ಮಾದೇಶ ಮತ್ತು ನಾಗು ವಿರುದ್ಧ ಎಫ್ಐಆರ್ ದಾಖಲಿಸಲಾಗಿರುವುದನ್ನು ಖಚಿತ ಪಡಿಸಿರುವ ಡಿಸಿಪಿ ಎಂ.ಮುತ್ತುರಾಜ್, ಮಾದೇಶ್ ತನ್ನೊಂದಿಗೆ ನಾಗುವಿನ ಫೋನ್ ನಲ್ಲಿ ಮಾತನಾಡಿರುವ ಬಗ್ಗೆ ದೂರುದಾರರು ಹೇಳಿದ್ದರಿಂದ, ಪೊಲೀಸರು ಎಫ್ಐಆರ್ನಲ್ಲಿ ಮಾದೇಶ ಹೆಸರು ಸೇರಿಸಿದ್ದೇವೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
key words: Extortion case, Avva Madhesh, Naagu, police custody, Mysore

Avva Madhesh’s associate Naagu taken into police custody






