ಮಹಿಳಾ ಆಧಿಕಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಟೆಂಡರ್

ಹಾಸನ,ಜೂ,14,2019(www.justkannada.in):  ಲಾನ್ ಸ್ವಚ್ಛಗೊಳಿಸುವಂತೆ ಸೂಚಿಸಿದ ಮಹಿಳಾ ಅಧಿಕಾರಿಯ ಮೇಲೆ ಕಚೇರಿ ಅಟೆಂಡರ್ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹಾಸನದ ಸಂತೆಪೇಟೆಯಲ್ಲಿರುವ ಸೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.

ಎಇಇ ಸ್ವಾತಿ ದೀಕ್ಷಿತ್ ಅವರೇ ಹಲ್ಲೆಗೊಳಗಾದವರು. ಮಂಜುನಾಥ್  ಎಂಬಾತನೇ ಹಲ್ಲೆ ನಡೆಸಿರುವ ಅಟೆಂಡರ್. ಕಚೇರಿಯ ಲಾನ್ ಸ್ವಚ್ಛಗೊಳಿಸುವಂತೆ ಎಇಇ ಸ್ವಾತಿ ದೀಕ್ಷಿತ್  ಮಂಜುನಾಥ್ ಗೆ ಸೂಚಿಸಿದ್ದಾರೆ. ಈ ವಿಚಾರಕ್ಕೆ ಕೋಪಗೊಂಡ ಮಂಜುನಾಥ್, ಎಇಇ ಸ್ವಾತಿ ದೀಕ್ಷಿತ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯ ವೇಳೆ ತಡೆಯಲು ಹೋದ ಸಹೋದ್ಯೋಗಿ ವೆಂಕಟೇಗೌಡ ಎಂಬುವರ ಮೇಲೂ ಹಲ್ಲೆ ನಡೆಸಲಾಗಿದೆ.

ಹಲ್ಲೆಗೊಳಗಾದ ಸ್ವಾತಿ ದೀಕ್ಷಿತ್ ಹಾಗೂ ವೆಂಕಟೇಗೌಡರನ್ನು ಹಾಸನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಆರೋಪಿ ಮಂಜುನಾಥ್ ನನ್ನ  ಮಂಜುನಾಥನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Key words: attender assult on  Woman officer in Hassan

#hassan #attender #assult #Womanofficer