ಮಚ್ಚಿನಿಂದ ಹಲ್ಲೆ ನಡೆಸಿ 60 ಲಕ್ಷ ರೂ. ದೋಚಿದ್ದ ಖದೀಮರ ಬಂಧನ.

ಬೆಂಗಳೂರು,ಡಿಸೆಂಬರ್,19,2023(www.justkannada.in):  ವ್ಯಕ್ತಿಯೊಬ್ಬರಿಗೆ ದುಬೈನಿಂದ ಚಿನ್ನದ ಆಸೆ ತೋರಿಸಿ ಬಳಿಕ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ 60 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಖದೀಮರನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸೈಯ್ಯದ್ ಇರ್ಫಾನ್,  ರಿಜ್ವಾನ್, ದಿವಾಕರ್, ಸತೀಶ್, ಅಶ್ರಫ್ ಬಂಧಿತ ಆರೋಪಿಗಳು. ಡಿಸೆಂಬರ್ 11 ರಂಧು ಆದರ್ಶ್ ನಗರದಲ್ಲಿ ಈ ಘಟನೆ ನಡೆದಿತ್ತು.  ಪಾನ್ ಬ್ರೋಕರ್ ಕೆಲಸ ಮಾಡುತ್ತಿದ್ದ ಸಂಕೇತ್ ಎಂಬುವವರನ್ನ ಕರೆಸಿ ದುಬೈನಿಂದ ಚಿನ್ನ ತಂದಿದ್ದು ದುಬೈ ದರದಲ್ಲಿ ಚಿನ್ನ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ ವಂಚನೆ ವಿಷಯ ತಿಳಿದ ಸಂಕೇತ್ ಹಣ ಕೊಡಲು ನಿರಾಕರಿಸಿದ್ದರು.

ಈ ವೇಳೆ ಬಂಧಿತ ಆರೋಪಿಗಳು ಸಂಕೇತ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ 60 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನ ಕಾರ್ಯಾಚರಣೆಗಿಳಿದ ಬಸವೇಶ್ವರ ಠಾಣಾ ಪೊಲೀಸರು ಇದೀಗ ಖದೀಮರನ್ನ ಬಂಧಿಸಿದ್ದು ಬಂಧಿತರಿಂದ 53 ಲಕ್ಷ ರೂ. ನಗದನ್ನ ವಶಕ್ಕೆ ಪಡೆದಿದ್ದಾರೆ.

Key words: attacked  – Rs 60 lakh-robbery- Arrest-bangalore