Sunday, September 20, 2026

BDA Apartments

ಫುಡ್ ಡೆಲಿವರಿ ಬಾಯ್ಸ್ ಮೇಲೆ ಹಲ್ಲೆ: ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿ… BDA JK_A...
Home Crime ಫುಡ್ ಡೆಲಿವರಿ ಬಾಯ್ಸ್ ಮೇಲೆ ಹಲ್ಲೆ:  ದರೋಡೆ ಮಾಡಿ  ದುಷ್ಕರ್ಮಿಗಳು ಪರಾರಿ…

ಫುಡ್ ಡೆಲಿವರಿ ಬಾಯ್ಸ್ ಮೇಲೆ ಹಲ್ಲೆ:  ದರೋಡೆ ಮಾಡಿ  ದುಷ್ಕರ್ಮಿಗಳು ಪರಾರಿ…

ಬೆಂಗಳೂರು,ಜ,9,2020(www.justkannada.in):  ಪುಡ್ ಆರ್ಡರ್ ಮಾಡಿದ ದುಷ್ಕರ್ಮಿಗಳು ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ಹಣ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಕಾಟನ್ ಪೇಟೆ ಮತ್ತು ಸುಬ್ರಮಣ್ಯಪುರ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾಟನ್ ಪೇಟೆಯಲ್ಲಿ ಮಧು, ಸುಬ್ರಮಣ್ಯಪುರದಲ್ಲಿ ಸಚಿನ್ ಎಂಬ ಫುಡ್ ಡೆಲಿವರಿ ಬಾಯ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಮೊದಲಿಗೆ ಫುಡ್ ಡೆಲಿವರಿ ಮಾಡಿದ್ದ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಫುಡ್ ಡೆಲವರಿ ಬಾಯ್ ಬರುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಿ ಪುಡ್ ಡಿಲವರಿ ಬಾಯ್ಸ್ ಬಳಿ ಇದ್ದ  ಫುಡ್ ಜತೆ ಚೈನ್ ಪರ್ಸ್ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಶುರು ಮಾಡಿದ್ದಾರೆ.

Key words: Attack – Food -Delivery Boys-Robbery -escapes