Friday, September 18, 2026

BDA Apartments

Home Front Page ವೋಟರ್ ಐಡಿ ಅಕ್ರಮದ ಪಿತಾಮಹ ಅಶ್ವಥ್ ನಾರಾಯಣ್- ಸಮಗ್ರ ತನಿಖೆಗೆ ಡಿ.ಕೆ ಶಿವಕುಮಾರ್ ಆಗ್ರಹ.

ವೋಟರ್ ಐಡಿ ಅಕ್ರಮದ ಪಿತಾಮಹ ಅಶ್ವಥ್ ನಾರಾಯಣ್- ಸಮಗ್ರ ತನಿಖೆಗೆ ಡಿ.ಕೆ ಶಿವಕುಮಾರ್ ಆಗ್ರಹ.

ಬೆಂಗಳೂರು,ನವೆಂಬರ್,17,2022(www.justkannada.in): ರಾಜ್ಯ ಸರ್ಕಾರದ ವಿರುದ್ಧ ವೋಟರ್ ಐಡಿ ಅಕ್ರಮದ ಆರೋಪ ಕೇಳಿ ಬಂದಿದ್ದು ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕರು  ಆಗ್ರಹಿಸಿದ್ದಾರೆ.

ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವೋಟರ್ ಐಡಿ ಅಕ್ರಮದ ಪಿತಾಮಹ ಅಶ್ವಥ್  ನಾರಾಯಣ್. ಅಶ್ವಥ್ ಸಹಕಾರ ಇಲ್ಲದೇ ಈ ರೀತಿ ನಡೆಯುತ್ತಾ..?  ಎಂದು ಪ್ರಶ್ನಿಸಿದರು.ವೋಟರ್ ಐಡಿ ಅಕ್ರಮದ ಪಿತಾಮಹ ಅಶ್ವಥ್ ನಾರಾಯಣ್ dks

ಮತದಾರರ ಮಾಹಿತಿ ಕಳವು ಪ್ರಜಾಪ್ರಭುತ್ವದ ಕಗ್ಗೋಲೆ. ಮತದಾರರ ಹಕ್ಕು ಕಿತ್ತುಕೊಳ್ಳುವ ಯತ್ನವಾಗಿದೆ. 18 ಸಾವಿರ ಜನರಿಗೆ ಐಡಿ ಕಾರ್ಡ್ ನೀಡಿದ್ದಾರೆ.  ಇದು ದೇಶದಲ್ಲೇ ಚರ್ಚೆಯಾಗಬೇಕಿರುವ ವಿಚಾರ.  ಕೂಡಲೇ ಚುನಾವಣಾ ಆಯೋಗ  ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಅಕ್ರಮದಲ್ಲಿ ಭಾಗಿಯಾದವರ ಮೇಲೆ ಎಫ್ ಐಆರ್ ದಾಖಲಿಸಬೇಕು ಸಿಎಂ ಬೊಮ್ಮಾಯಿ ವಿರುದ್ದವೂ ಎಫ್ ಐ ಆರ್ ದಾಖಲಿಸಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

Key words: Ashwath Narayan – father – Voter ID- illegality- DK Shivakumar