ಜಿಲ್ಲಾಧಿಕಾರಿಗಳ ಆದೇಶಕ್ಕೂ ಡೋಂಟ್ ಕೇರ್: ಚಾಮುಂಡಿ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತ ಸಮೂಹ.

ಮೈಸೂರು,ಜುಲೈ,30,2021(www.justkannada.in): ಕೊರೋನಾ ಹಿನ್ನೆಲೆ ಅಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು ಈ ನಡುವೆಯೂ ಚಾಮುಂಡಿ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವೇ ಬಂದಿದೆ.

ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ, ನಿರ್ಬಂಧದ ನಡುವೆಯೂ ಸಾವಿರರೂ ಸಂಖ್ಯೆಯ ಜನಸ್ತೋಮ ಸೇರಿದ್ದು, ಗಣ್ಯರಿಗೆ ಮಾತ್ರ ಪ್ರವೇಶವಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದಾದರು ಹೇಗೆ..? ಎಂಬ ಪ್ರಶ್ನೆ ಉದ್ಬವಿಸಿದೆ. ಪ್ರೊಟೊಕಾಲ್ ಇರುವ ವ್ಯಕ್ತಿಗಳು, ಕೆಲಸದ ನಿಮಿತ್ತ ಬೆಟ್ಟಕ್ಕೆ ತೆರಳುವ ಅಧಿಕಾರಿಗಳಿಗೆ  ಮಾತ್ರ ಅಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಪ್ರವೇಶವಿರುತ್ತದೆ ಎಂದು  ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಗಳ ಆದೇಶಕ್ಕೂ ಡೋಂಟ್ ಕೇರ್ ಎಂದು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಕರೋನಾ ನಡವೆಯೂ  ಸಾಮಾಜಿಕ ಅಂತರ ಮರೆತು ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಮುಂದಾಗಿದ್ದಾರೆ. ಬೆಟ್ಟಕ್ಕೆ ಮಾಧ್ಯಮಗಳಿಗೆ ನಿರ್ಭಂದವಿದೆ.ಆದರೆ ಗಣ್ಯರ ಹೆಸರಿನಲ್ಲಿ ಸಾವಿರ ಜನ ಸಮೂಹ ಆಗಮಿಸಿದ್ದು, ಪೊಲೀಸರು ಒತ್ತಡಕ್ಕೆ ಮಣಿದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಎಂಟ್ರಿ ಕೊಟ್ರಾ ಎಂಬ ಶಂಕೆ ವ್ಯಕ್ತವಾಗಿದೆ.

ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹಿನ್ನೆಲೆ ಬೆಟ್ಟದ ತಪ್ಪಲಲ್ಲಿ ಪೊಲೀಸರು ವಾಹನಗಳನ್ನ ತಡೆಹಿಡಿಯುತ್ತಿದ್ದರು. ಆದರೆ ಇಂದು ಬೆಟ್ಟಕ್ಕೆ  ನೂರಾರು ಸಂಖ್ಯೆಯ ವಾಹನಗಳು ಆಗಮಿಸುತ್ತಿದ್ದು ಗಣ್ಯರ ಹೆಸರಿನಲ್ಲಿ ಆಗಮಿಸಿದ್ದು ಯಾರು? ಜಿಲ್ಲಾಧಿಕಾರಿ ಆದೇಶಕ್ಕೂ ಇಲ್ಲವಾ ಕಿಮ್ಮತ್ತು ಎಂಬ ಪ್ರಶ್ನೆ ಎದ್ದಿದೆ.

ENGLISH SUMMARY…

Devotees throng at Chamundi hills neglecting DC orders
Mysuru, July 30, 2021 (www.justkannada.in): Due to the fear of an increase in corona cases, entry of devotees is atop the Chamundi hills is prohibited on the occasion of ‘Ashada Friday. But hundreds of devotees thronged the hill despite prohibition orders.
As it is the occasion of goddess Chamundeshwari Vardhanti, thousands of people have gathered atop the hills causing concern for the district administration. The district administration had issued orders that only dignitaries who have protocol and officials who have work will be allowed to visit the hill on Friday.
But the number of people gathered atop the hill has made way to suspicion and also has caused fear of spreading of Coronavirus.
Keywords: Chamundi hill/ Goddess Chamundeshwari/ Vardhanti/ heavy rush

Key words: ashada-Friday-Chamundi Hill – huge group -devotees.