Sunday, September 20, 2026

BDA Apartments

ಮೈಸೂರಿನಲ್ಲೂ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಮೂವರ ಬಂಧನ BDA JK_Adv BDA Adv
Home Front Page ಮೈಸೂರಿನಲ್ಲೂ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಮೂವರ ಬಂಧನ

ಮೈಸೂರಿನಲ್ಲೂ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಮೂವರ ಬಂಧನ

ಮೈಸೂರು, ಏಪ್ರಿಲ್ 21, 2020 (www.justkannada.in): ಮೈಸೂರಿನಲ್ಲೂ ಆಶಾ ಕಾರ್ಯಕರ್ತೆಯೋರ್ವರ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಬನ್ನಿಮಂಟಪದ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಸ್ ಅವರು ಸೋಂಕು ನಲಕ್ಷಣಗಳು ಸರ್ವೇ ಮಾಡುವ ವೇಳೆಯಲ್ಲಿ ಮೂವರು ಪುಂಡರಿಂದ ದೌರ್ಜನ್ಯ ಮಾಡಿದ್ದರು.

ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದಿಕೊಳ್ಳಿ ಎಂದಿದ್ದಕ್ಕೆ ಮೆಹಬೂಬ್, ಖಲೀಲ್, ಜೀಸನ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ಮೇಲೆ ಮುಗಿಬಿದ್ದಿದ್ದರು.

ಆಶಾ ಕಾರ್ಯಕರ್ತೆ ನಂತರ ಎನ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಎನ್ ಆರ್ ಪುರ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.