ಬೆಂಗಳೂರು, ಅಕ್ಟೋಬರ್,11,2025 (www.justkannada.in): ಪ್ರೇಯಸಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೇಯಸ್ ಬಂಧಿತ ಆರೋಪಿ . ತನ್ನ ಪ್ರೇಯಸಿ ಚಿನ್ನದ ಓಲೆ ಮಾಡಿಸಿ ಕೊಡುವಂತೆ ಕೇಳಿದ್ದರಿಂದ ಈತ ಕಳ್ಳತನಕ್ಕಿಳಿದಿದ್ದ. ಹರೀಶ್ ಎಂಬುವವರ ಮನೆಯಲ್ಲಿ ಶ್ರೇಯಸ್ ಚಿನ್ನಾಭರಣ ಕಳ್ಳತನ ಮಾಡಿದ್ದನು ಎನ್ನಲಾಗಿದೆ.
ಇದೀಗ ಆರೋಪಿ ಶ್ರೇಯಸ್ ನನ್ನು ಪೊಲೀಸರು ಬಂಧಿಸಿ 415ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Arrest, Thief, Lover, stealing, gold jewellery, seized