ತುಮಕೂರು,ಅ,14,2019(www.justkannada.in): ಅನೈತಿಕ ಸಂಬಂಧಕ್ಕೆ ಒಪ್ಪದಿದ್ದಕ್ಕೆ ವಿವಾಹಿತ ಮಹಿಳೆಗೆ ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಮುರರಾಯನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಿರೀಶ್ ಬಾಬು ಎಂಬಾತನೇ ಈ ಕೃತ್ಯವೆಸಗಿ ಬಂಧಿತನಾಗಿರುವುದು. ಪತಿ ಇಲ್ಲದಿದ್ದಾಗ ಸುಜಾತ ಎಂಬ ವಿವಾಹಿತ ಮಹಿಳೆ ಮನೆಗೆ ತೆರಳಿದ್ದ ಗಿರೀಶ್ ಬಾಬು ಆಕೆಯನ್ನ ಅನೈತಿಕ ಸಂಬಂಧ ಇಟ್ಟಿಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ ಇದಕ್ಕೆ ಒಪ್ಪದಿದ್ದಕ್ಕೆ ಸುಜಾತಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ತೀವ್ರಗಾಯಗಳಿಂದ ಗಾಯದಿಂದ ಬಳಲುತ್ತಿದ್ದ ಸುಜಾತ ಸಾವನ್ನಪ್ಪಿದ್ದು ಆರೋಪಿ ಗಿರೀಶ್ ಬಾಬುನನ್ನ ಪಾವಗಡ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
Key words: Arrest- accused – married woman – refusing – tumakur






