ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಆಗ್ರಹ: ಸಿಎಂ ಬಿಎಸ್ ವೈ ಭೇಟಿಯಾಗಿ ಮನವಿ ಸಲ್ಲಿಸಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್…

ಬೆಂಗಳೂರು,ಅ,14,2019(www.justkannada.in):  ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ  ಸಿಎಂ ಬಿಎಸ್ ಯಡಿಯೂರಪ್ಪಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್  6 ತಾಲ್ಲೂಕುಗಳನ್ನ ಸೇರಿಸಿ ಹುಣಸೂರು ಹೊಸ ಜಿಲ್ಲೆಯನ್ನಾಗಿ ಮಾಡುವಂತೆ ಒತ್ತಾಯಿಸಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮದ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಹೊಸ ಜಿಲ್ಲೆಯನ್ನಾಗಿ  ಮಾಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇನೆ. 6 ತಾಲ್ಲೂಕುಗಳನ್ನ ಸೇರಿಸಿ ಹೊಸ ಜಿಲ್ಲೆಯನ್ನಾಗಿಸಬೇಕು. ಅದಕ್ಕೆ ದಿ. ಡಿ. ದೇವರಾಜ್ ಅರಸು ಅವರ ಹೆಸರಿಡಬೇಕು. ದೇಶ ಮತ್ತು ರಾಜ್ಯಕ್ಕೆ ದೇವರಾಜ ಅರಸು ಅವರ ಕೊಡುಗೆ ಅಪಾರ. ಹೀಗಾಗಿ ಅವರ ಹೆಸರು ಅಜರಾಮರವಾಗಿರಬೇಕು ಎಂದರು.

ಇನ್ನು ಪ್ರತ್ಯೇಕ ಜಿಲ್ಲೆ ಸಂಬಂಧ ಶೀಘ್ರದಲ್ಲೇ ಜನಪ್ರತಿನಿಧಿಗಳು, ಜನರು , ಸಂಘಸಂಸ್ಥೆಗಳನ್ನ ಕರೆದು ಚರ್ಚೆಸುತ್ತೇವೆ. ಮುಂದಿನ ರೂಪುರೇಷೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು.

Key words: Demand- separate hunsur district- disqualified MLA -H. Vishwanath- appealed – CM Bs yeddyurappa