ಅರ್ನಾಬ್ ಗೋಸ್ವಾಮಿ ಬಂಧನದಿಂದ ಸಂತೋಷವಾಗಿದೆ : ಅನ್ವಯ್ ನಾಯಕ್ ಕುಟುಂಬ

0
593

ಬೆಂಗಳೂರು,ನವೆಂಬರ್,04,2020(www.justkannada.in)  : ಈ ಹಿಂದೆ ಪೊಲೀಸರಿಂದ ಪ್ರಕರಣವನ್ನು ಮುಚ್ಚುವಂತೆ ನಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನದಿಂದ ಸಂತೋಷವಾಗಿದೆ ಎಂದು ಅನ್ವಯ್ ನಾಯಕ್ ಕುಟುಂಬ ಸಂತೋಷವ್ಯಕ್ತಪಡಿಸಿದೆ.jk-logo-justkannada-logo

ಅರ್ನಾಬ್ ಗೋಸ್ವಾಮಿ ಬಂಧನ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅನ್ವಯ್ ನಾಯಕ್ ಪತ್ನಿ, ಈ ಸಮಸ್ಯೆಯನ್ನು ರಾಜಕೀಯವಾಗಿಸಲು ನಾವು ಬಯಸುವುದಿಲ್ಲ. ಈ ಸಮಸ್ಯೆಯಿಂದಾಗಿ ನಾನು ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ. ಅರ್ನಾಬ್ ಗೋಸ್ವಾಮಿಯಂತಹ ಶಕ್ತಿಶಾಲಿ ಜನರು ಇಂತಹ ವಿಷಯಗಳಿಂದ ಎಷ್ಟು ದೂರವಾಗುತ್ತಾರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ ಎಂದು ಹೇಳಿದ್ದಾರೆ.

ಆತ್ಮಹತ್ಯೆ ಪತ್ರವಿಲ್ಲದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನ ಮಾಡಬೇಕೆಂದು ಅರ್ನಾಬ್ ಗೋಸ್ವಾಮಿ ಹೇಳುತ್ತಲೇ ಇದ್ದರು. ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಾಗ ಅರ್ನಾಬ್ ಮತ್ತು ಇನ್ನಿಬ್ಬರನ್ನು ಹೆಸರಿಸಿ ಆತ್ಮಹತ್ಯೆ ಟಿಪ್ಪಣಿ ಬರೆದಿದ್ದರು. ಆದರೆ,ಯಾರನ್ನೂ ಬಂಧಿಸಿರಲಿಲ್ಲ. ಬಹಳ ಹಿಂದೆಯೇ ಮಾಡಬೇಕಾಗಿತ್ತು. ಇಂದು ಮಾಡಿದ್ದಾರೆ ಎಂದು ನಾಯಕ್ ಅವರ ಪತ್ನಿ ತಿಳಿಸಿದ್ದಾರೆ.

Arnab Goswami,detention,happy,Anvay Nayak,Family

key words : Arnab Goswami-detention-happy-Anvay Nayak-Family