ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ.

ಬೆಂಗಳೂರು,ಜುಲೈ,26,2021(www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ  ಕೆ. ಸದಾಶಿವ ಶೆಣೈ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಸದಸ್ಯರಾಗಿ ಕನ್ನಡ ಪ್ರಭ ದಿನಪತ್ರಿಕೆ ಪ್ರಧಾನ ವರದಿಗಾರ ಗೋಪಾಲ ಸಿಂಗಪ್ಪಯ್ಯ ಯಡಗೆರೆ,  ಕೆ.ಕೆ ಮೂರ್ತಿ, ಶಿವಕುಮಾರ್  ಬೆಳ್ಳಿತಟ್ಟೆ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರಿನ ಪತ್ರಕರ್ತರಾದ ಸಿ.ಕೆ ಮಹೇಂದರ್, ಕೂಡ್ಲಿ ಗುರುರಾಜು,  ಮಂಗಳೂರಿನ ಜಯಕಿರಣ ದೈನಿಕ ಬಿಜೈನ ಹಿರಿಯ ವರದಿಗಾರರಾದ  ಜಗನ್ನಾಥ ಬಾಳ, ಕಲ್ಬುರ್ಗಿಯ ಬುದ್ಧಲೋಕದ ಸಂಪಾದಕರಾದ ದೇವೇಂದ್ರಪ್ಪ ಕಪನೂರು,  ಶಿವಮೊಗ್ಗದ ನಮ್ಮನಾಡು  ಸಂಪಾದಕರಾದ ಕೆ.ವಿ ಶಿವಕುಮಾರ್ ಅವರನ್ನ ನೇಮಕ ಮಾಡಲಾಗಿದೆ.

ENGLISH SUMMARY….

President and members for Karnataka Media Academy appointed
Bengaluru, July 26, 2021 (www.justkannada.in): The following persons have been appointed as the president and members of the Karnataka Media Academy.
K. Sadashiva Shenoy, has been appointed as the President of Karnataka Media Academy. Gopal Singappaiah Yedager, Chief Reporters, Kannadaprabha, K.K.Murthy, Shivakumar Bellithatte, Shivananda Tagaduru, President, Karnataka Working Journalists Association President, senior reporters from Mysuru C.K. Mahendra, Koodli Gururaj, Jagannath Baala, Senior Reporter, Jayakirana Dainika Bijai, Mangaluru, Devedrappa Kapanuru, Editor, Buddhaloka, Kalaburagi, K.V. Shivakumar, Editor, Nammanadu, Shivamogga have been appointed as members.
Keywords: Karnataka Media Academy/ President/ members/ appointed

Key words: Appointment -President -Member – Karnataka Media Academy