Sunday, August 23, 2026

BDA Apartments

Home Front Page ಭಾರತೀಯ ಅಂಚೆ ಇಲಾಖೆಯಿಂದ 40 ಸಾವಿರ ಹುದ್ದೆಗಳ ನೇಮಕಕ್ಕೆ ಅರ್ಜಿ

ಭಾರತೀಯ ಅಂಚೆ ಇಲಾಖೆಯಿಂದ 40 ಸಾವಿರ ಹುದ್ದೆಗಳ ನೇಮಕಕ್ಕೆ ಅರ್ಜಿ

ಬೆಂಗಳೂರು, ಜನವರಿ 29, 2023 (www.justkannada.in): ಭಾರತೀಯ ಪೋಸ್ಟ್ ಗ್ರಾಮೀಣ ಡಾಕ ಸೇವಕ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಒಟ್ಟು 40,889 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (www.indiapostgdsonline.gov.in) ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಮಾಹಿತಿ

ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ)ಡಾಕ ಸೇವಕ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ

ಅರ್ಜಿ ಆರಂಭವಾಗುವ ದಿನಾಂಕ ಜನವರಿ 27, 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 16, 2023

ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ಭಾರತ ಸರ್ಕಾರ / ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳು ನಡೆಸುವ ಗಣಿತ ಮತ್ತು ಇಂಗ್ಲಿಷ್ (ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿರಬೇಕು) 10 ನೇ ತರಗತಿಯ ಪಾಸ್‌ನ ಮಾಧ್ಯಮಿಕ ಶಾಲಾ ಪರೀಕ್ಷೆಯ ಪಾಸ್ ಪ್ರಮಾಣಪತ್ರ ಅತ್ಯಗತ್ಯ.