Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಎಪಿಎಂಸಿ ಮಾರುಕಟ್ಟೆ ಶುಲ್ಕ ಇಳಿಕೆ: ರಾಜ್ಯ ಸರಕಾರದ ನಿರ್ಧಾರ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ.

ಎಪಿಎಂಸಿ ಮಾರುಕಟ್ಟೆ ಶುಲ್ಕ ಇಳಿಕೆ: ರಾಜ್ಯ ಸರಕಾರದ ನಿರ್ಧಾರ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ.

ಬೆಂಗಳೂರು, ಜುಲೈ 09, 2020 (www.justkannada.in): ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ.1.5 ನಿಂದ ಶೇ.1ಕ್ಕೆ ಇಳಿಕೆ ಮಾಡಿರುವ ನಿರ್ಧಾರವನ್ನು ಎಫ್.ಕೆ.ಸಿ.ಸಿ.ಐ. ಸ್ವಾಗತಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ.1.5 ನಿಂದ ಶೇ.1ಕ್ಕೆ ಇಳಿಸಿ, ತೀರ್ಮಾನ ಕೈಗೊಂಡಿರುವುದನ್ನು ಎಫ್.ಕೆ.ಸಿ.ಸಿ.ಐ. ಸ್ವಾಗತಿಸುತ್ತದೆ ಎಂದು ಅಧ್ಯಕ್ಷ ಸಿ.ಆರ್.ಜನಾರ್ಧನ್ ಹೇಳಿದ್ದಾರೆ.

ಆದರೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಹೊರಡಿಸಿರುವ ಆರ್ಡಿನೆನ್ಸ್ ಅನ್ವಯ ಎಪಿಎಂಸಿ ಪ್ರಾಂಗಣಗಳ ಹೊರತಾದ ವ್ಯಾಪಾರ ಪ್ರದೇಶಗಳಲ್ಲಿ ವ್ಯವಹರಿಸುವವರಿಗೆ ಮಾರುಕಟ್ಟೆ ಶುಲ್ಕ ವಿಧಿಸದೇ ಇದ್ದು, ಇದರಿಂದಾಗಿ ಎಪಿಎಂಸಿ ವರ್ತಕರು ಪೈಪೋಟಿಯನ್ನು ಎದುರಿಸಬೇಕಾಗಿರುವ ಸಂದರ್ಭ ಒದಗಿ ಬಂದಿತ್ತು.

ಈ ಬಗ್ಗೆ ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ.0.2ಕ್ಕೆ ಇಳಿಸಲು ಕೋರಿತ್ತು.

ಎಪಿಎಂಸಿ ಹಾಗೂ ಇದರ ಹೊರತಾದ ವ್ಯಾಪಾರಿ ಪ್ರದೇಶಗಳಲ್ಲಿ ನ್ಯಾಯಯುತ ಹಾಗೂ ಸಮಾನಾವಕಾಶ ಕಲ್ಪಿಸುವ ಸಂಬಂಧ ಹಾಗೂ ವ್ಯವಹಾರದಲ್ಲಿ ಏಕರೀತಿಯ ಸ್ಪರ್ಧೆಗೆ ಉತ್ತೇಜನ ನೀಡುವ ಸಂಬಂಧ ಮಾರುಕಟ್ಟೆ ಶುಲ್ಕವನ್ನು ಶೇ.0.2ಕ್ಕೆ ಇಳಿಸಲು ಮರುಪರಿಶೀಲಿಸಿ, ನಮ್ಮ ಬೇಡಿಕೆಯನ್ನು ಪರಿಗಣಿಸಲು ಒತ್ತಾಯಿಸುತ್ತೇವೆ ಎಂದು ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಸಿ ಆರ್ ಜನಾರ್ಧನ ಆಗ್ರಹಿಸಿದ್ದಾರೆ.