Thursday, August 20, 2026

BDA Apartments

Home Front Page ಟೀಕೆ ಮಾಡೋರಿಗೆ ಬಜೆಟ್ ನಲ್ಲಿ ಉತ್ತರ: ಸವಾಲು ಬಂದರೆ ಖುಷಿಯಾಗುತ್ತೆ – ಸಿಎಂ ಬಿಎಸ್ ವೈ…

ಟೀಕೆ ಮಾಡೋರಿಗೆ ಬಜೆಟ್ ನಲ್ಲಿ ಉತ್ತರ: ಸವಾಲು ಬಂದರೆ ಖುಷಿಯಾಗುತ್ತೆ – ಸಿಎಂ ಬಿಎಸ್ ವೈ…

ಮೈಸೂರು,ಫೆಬ್ರವರಿ,13,2021(www.justkannada.in):  ಟೀಕೆ ಮಾಡುವವರಿಗೆ ನಾನು ಬಜೆಟ್ ನಲ್ಲಿ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.jk

ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಮಾದ್ಯಮಗಳ ಜತೆ ಮಾತನಾಡಿದರು. ವಿರೋಧ ಪಕ್ಷಗಳ ಟೀಕೆಗಳಿಗೆ ಈಗ ಉತ್ತರಿಸುವುದಿಲ್ಲ. ಬಜೆಟ್ ನಲ್ಲಿ ಉತ್ತರ ನೀಡುತ್ತೇನೆ.  ಆರ್ಥಿಕ ಸ್ಥಿತಿ ಅರಿತು  ಬಜೆಟ್ ಮಂಡನೆಗೆ ಸಿದ್ಧತೆ ಮಾಡಲಾಗುತ್ತಿದೆ.  ಎರಡು ದಿನಗಳಲ್ಲಿ ಬಜೆಟ್ ಪೂರ್ವಬಾವಿ ಸಭೆ ಅಂತ್ಯವಾಗಲಿದೆ ಎಂದರು.

ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ,  ನನಗೆ ಇಂತಹ ಸವಾಲುಗಳು ಹೊಸದಲ್ಲ. ಸವಾಲುಗಳು ಬಂದಾಗ ನನಗೆ ಖುಷಿಯಾಗುತ್ತೆ, ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ.Answer - Budget –Criticism-CM BS Yeddyurappa- Statement - Mysore.

ಇನ್ನು ಎಲ್ಲರೂ ತಮ್ಮ ತಮ್ಮ ಸಮುದಾಯಕ್ಕೆ ನ್ಯಾಯ ಕೇಳುತ್ತಿದ್ದಾರೆ. ಕೇಳುವುದು ಅವರ ಹಕ್ಕು, ಅದನ್ನು ಪರಿಶೀಲಿಸಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Key words:  Answer – Budget –Criticism-CM BS Yeddyurappa- Statement – Mysore.