Tuesday, September 15, 2026

BDA Apartments

ಬೆಂಗಳೂರಿನಲ್ಲಿ ಮತ್ತೊಂದು ಡ್ರಗ್ಸ್ ಜಾಲ ಪತ್ತೆ: ಮೂವರ ಬಂಧನ… BDA JK_Adv BDA Adv
Home Crime ಬೆಂಗಳೂರಿನಲ್ಲಿ ಮತ್ತೊಂದು ಡ್ರಗ್ಸ್ ಜಾಲ ಪತ್ತೆ: ಮೂವರ ಬಂಧನ…

ಬೆಂಗಳೂರಿನಲ್ಲಿ ಮತ್ತೊಂದು ಡ್ರಗ್ಸ್ ಜಾಲ ಪತ್ತೆ: ಮೂವರ ಬಂಧನ…

ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ಕೆಲ ನಟಿ ನಟಿಯರು ಸಿಲುಕಿರುವ ಆರೋಪ ಬೆನ್ನಲ್ಲೆ ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಡ್ರಗ್ಸ್ ಜಾಲ ಪತ್ತೆಯಾಗಿದೆ.jk-logo-justkannada-logo

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮೂವರು ಕೇರಳ ಯುವಕರನ್ನ ಬಂಧಿಸಲಾಗಿದೆ. ಶೆಜಿನ್, ಸುಬ್ರಮಣಿ, ವಿದುಶ್ ಬಂಧಿತ ಆರೋಪಿಗಳು. ಈ ಕುರಿತು ಸುದ್ಧಿಗೊಷ್ಠಿ ನಡೆಸಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬೆಂಗಳೂರಿನಲ್ಲಿ ಮತ್ತೊಂದು ಡ್ರಗ್ಸ್ ಜಾಲದ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಮೂವರು ಯುವಕರನ್ನ ಬಂಧಿಸಲಾಗಿದೆ. ಬಂಧಿತರಿಂದ 2ಕೆಜಿ ಗಾಂಜಾ 44 ಲಕ್ಷ ಮೌಲ್ಯದ ಹ್ಯಾಶಿಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.Another -Drugs network- Detected -Bangalore -arrest -three

ಶೆಜಿನ್, ಸುಬ್ರಮಣಿ, ವಿದುಶ್ ಮೂವರು ಯುವಕರು ಕೇರಳ ಮೂಲದ ಯುವಕರಾಗಿದ್ದು ಲಂಡನ್ ನಲ್ಲಿ ಓದಿಕೊಂಡು ಬಂದಿದ್ದರು. ಮೂವರಿಗೆ ಆಂಧ್ರ ಪ್ರದೇಶದ ವೈಜಾಗ್ ನಲ್ಲಿ ಡ್ರಗ್ಸ್ ಪೆಡ್ಲರ್ ಗಳ ಜತೆ ಸಂಪರ್ಕವಿತ್ತು. ಡ್ರಗ್ಸ್ ಮಾರಿದ ಹಣದಲ್ಲಿ ಯುವಕರು ಮೋಜು ಮಸ್ತಿ ಮಾಡುತ್ತಿದ್ದರು ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

Key words: Another -Drugs network- Detected -Bangalore -arrest -three