ಮೈಸೂರಿನಲ್ಲಿ ಮತ್ತೆ ಮೊಳಗಿದ ಮುಂದಿನ ಸಿಎಂ ವಿಜಯೇಂದ್ರ ಘೋಷಣೆ: ಮುಜಗರಕ್ಕೆ ಒಳಗಾದ ಸಚಿವ ವಿ ಸೋಮಣ್ಣ.

ಮೈಸೂರು,ಜೂನ್,7,2022(www.justkannada.in): ದಕ್ಷಿಣ ಪದವೀಧರ ಕ್ಷೇತ್ರ ಚುನಾವಣಾ ಪ್ರಚಾರ ಚುರುಕುಗೊಂಡಿದ್ದು, ಮೈಸೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಪ್ರಚಾರ ಸಭೆಗೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಮುಂದಿನ ಸಿಎಂ ವಿಜಯೇಂದ್ರ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಸಚಿವ ವಿ.ಸೋಮಣ್ಣ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ ಜಂಟಿ ಸಭೆ ಆಯೋಜನೆ ಮಾಡಲಾಗಿತ್ತು‌. ಸಭೆಯಲ್ಲಿ ಶಾಸಕ  ಎಲ್ ನಾಗೇಂದ್ರ, ಮೇಯರ್ ಸುನಂದ ಪಾಲನೇತ್ರ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ನಗರಾದ್ಯಕ್ಷ ಶ್ರೀವತ್ಸ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ನಡುವೆ ಸಭೆಗೆ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ತಡವಾಗಿ ಆಗಮಿಸಿದರು. ಈ ವೇಳೆ ಸಚಿವ ಸೋಮಣ್ಣ ಎದುರು ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಕಾರ್ಯಕರ್ತರು ಜೈಕಾರ ಕೂಗಿದ ಪ್ರಸಂಗ ನಡೆಯಿತು. ಈ ಸಮಯದಲ್ಲಿ ಸಚಿವ ವಿ ಸೋಮಣ್ಣ ಮುಜಗರಕ್ಕೆ ಒಳಗಾದರು.

ಬಳಿಕ  ಬಿವೈ ವಿಜಯೇಂದ್ರ ವೈಯಕ್ತಿಕ ಘೋಷಣೆ ಕೂಗದಂತೆ ಅಭಿಮಾನಿಗಳಿಗೆ ಮನವಿ ಮಾಡಿದರು. ಇದು ಪಕ್ಷದ ಕಾರ್ಯಕ್ರಮ ಯಾರೂ ವೈಯಕ್ತಿಕ ಘೋಷಣೆ ಕೂಗಬೇಡಿ ಎಂದ ಬೆಂಬಲಿಗರಿಗೆ ಸೂಚಿಸಿದರು.

ಇಬ್ಬರು ನಾಯಕರುಗಳಿಗೆ ಮುಜುಗರ ಉಂಟುಮಾಡುವುದನ್ನು ತಪ್ಪಿಸಲು ಮುಂದಾದ ಕಾಪು ಸಿದ್ದಲಿಂಗಸ್ವಾಮಿ.

ಇಬ್ಬರು ನಾಯಕರುಗಳಿಗೆ ಮುಜುಗರ ಉಂಟುಮಾಡುವುದನ್ನು ತಪ್ಪಿಸಲು ಮುಂದಾದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ  ಅಧ್ಯಕ್ಷ  ಕಾಪು ಸಿದ್ದಲಿಂಗಸ್ವಾಮಿ, ಘೋಷಣೆ ಕೂಗಿ ವಿಜಯೇಂದ್ರ, ವಿ ಸೋಮಣ್ಣರಿಗೆ ಮುಜುಗರ ತರಬೇಡಿ ಎಂದು ಸಭೆಗೂ ಮುನ್ನ ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶ ನೀಡಿದರು.

ಇಬ್ಬರು ನಾಯಕರು ಆಗಮಿಸುವ ವೇಳೆ ಪ್ರತ್ಯೇಕ ಘೋಷಣೆ ಕೂಗಬೇಡಿ. ವಿಜಯೇಂದ್ರ ಹಾಗೂ ವಿ. ಸೋಮಣ್ಣ ನಮ್ಮ ಸಮಾಜದ ಎರಡು ಕಣ್ಣುಗಳು. ಇಬ್ಬರು ನಾಯಕರು ಬಂದಾಗ ಪ್ರತ್ಯೇಕ ಘೋಷಣೆ ಬೇಡ, ಮುಜುಗರ ಉಂಟು ಮಾಡೋದು ಬೇಡ. ಪದವೀಧರ  ಚುನಾವಣೆ ಇರುವುದರಿಂದ ತಪ್ಪು ಸಂದೇಶ ಹೋಗುವುದು ಬೇಡ. ಜೋರಾಗಿ ಕೂಗುವುದರಿಂದ ಚುನಾವಣೆಗೆ ಗೊಂದಲ ಮಾಡುವುದು ಬೇಡ ಎಂದು ಮನವಿ ಮಾಡಿದರು.

Key words:  announcement-bjp-activitist-next-CM Vijayendra-Mysore