Thursday, July 30, 2026

BDA Apartments

Home Front Page ಯಾವುದೇ ಕಾರಣಕ್ಕೂ ಚನ್ನಪಟ್ಟಣದಿಂದ  ಅನಸೂಯ ಸ್ಪರ್ಧಿಸಲ್ಲ- ಸಂಸದ ಡಾ.ಮಂಜುನಾಥ್

ಯಾವುದೇ ಕಾರಣಕ್ಕೂ ಚನ್ನಪಟ್ಟಣದಿಂದ  ಅನಸೂಯ ಸ್ಪರ್ಧಿಸಲ್ಲ- ಸಂಸದ ಡಾ.ಮಂಜುನಾಥ್

ಬೆಂಗಳೂರು,ಅಕ್ಟೋಬರ್,23,2024 (www.justkannada.in): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಅನಸೂಯ ಮಂಜುನಾಥ್  ಹೆಸರು ಕೇಳಿಬಂದಿದೆ ಎಂಬ ಸುದ್ದಿ ಹಿನ್ನೆಲೆ ಈ ಕುರಿತು ಸಂಸದ ಡಾ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಸದ ಡಾ.ಮಂಜುನಾಥ್, ಚನ್ನಪಟ್ಟಣ ಕ್ಷೇತ್ರದಿಂಧ ಅನಸೂಯ ಸ್ಪರ್ಧೆ ಇಲ್ಲ. ಆ ರೀತಿಯ ಯಾವುದೇಚರ್ಚೆ ಆಗಿಲ್ಲ. ಯಾವುದೇ ಕಾರಣಕ್ಕೂ ಅನಸೂಯ ಸ್ಪರ್ಧಿಸಲ್ಲ.  ಸ್ಪರ್ಧೆ ವಿಚಾರ ಸತ್ಯಕ್ಕೆ ದೂರ.  ಅನುಸೂಯ ಸ್ಪರ್ಧೆಗೆ ನಮ್ಮ ಕುಟುಂಬ ಒಪ್ಪಿಲ್ಲ ಎಂದಿದ್ದಾರೆ.

ಮೈತ್ರಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ ನಿಂದ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಇತ್ತ ಎನ್ ಡಿಎ ಮೈತ್ರಿ ಅಭ್ಯರ್ಥಿ ಗೆ  ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿ ಬಂದಿದೆ.

Key words: Anasuya, not contest, Channapatnam, MP Dr. Manjunath