ಅಮಿತ್ ಶಾಗೆ ಕನ್ನಡಿಗರ ಬಳಿ ಮತ ಕೇಳಲು ಯಾವ ನೈತಿಕತೆಯೂ ಇಲ್ಲ- ಸಿಎಂ ಸಿದ್ದರಾಮಯ್ಯ.

ಮೈಸೂರು,ಏಪ್ರಿಲ್,1,2024 (www.justkannada.in): ಕೇಂದ್ರಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ರಾಜ್ಯಕ್ಕೆ ಆಗಮಿಸಿರುವ. ಅಮಿತ್ ಶಾ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಮಿತ್ ಶಾಗೆ  ಕನ್ನಡಿಗರ ಮತ ಕೇಳಲು ಯಾವ ನೈತಿಗತೆಯೂ  ಇಲ್ಲ. ಬರಗಾಲದ ಪರಿಹಾರವಾಗಿ 5 ಪೈಸೆಯೂ ನೀಡಿಲ್ಲ. ಅಮಿತ್ ಶಾ ತಮ್ಮ ಮನೆಯಿಂದ ಪರಿಹಾರ ಕೊಡ್ತಾರಾ…? ಎಂದು ಪ್ರಶ್ನಿಸಿದರು.

ಮೊದಲು ಬರ ಪರಿಹಾರ ನೀಡಿ ನಂತರ ಕರ್ನಾಟಕಕ್ಕೆ ಬರಲಿ.  ಕನ್ನಡಿಗರು ಬಿಜೆಪಿಗೆ ಸರಿಯಾಗಿ ಪಾಠ ಕಲಿಸ್ತಾರೆ ಎಂದು ಗುಡುಗಿದ ಸಿಎಂ ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಕ್ತಾರರ ರೀತಿ ಮಾತನಾಡುತ್ತಿದ್ದಾರೆ. ಪರಿಹಾರ  ನೀಡದವರನ್ನ  ಹೆಚ್.ಡಿಕೆ ಸಮರ್ಥಿಸಿಕೊಳ್ತಾರೆ ಎಂದು ಕಿಡಿಕಾರಿದರು.

Key words: Amit Shah, votes, CM Siddaramaiah.