ಈ ವರ್ಷ ಕ್ರಿಸ್ಮಸ್’ಗೆ ಅಲ್ಲು ಅರ್ಜುನ್ ‘ಪುಷ್ಪ’ ಬಿಡುಗಡೆ

ಬೆಂಗಳೂರು, ಆಗಸ್ಟ್ 4, 2021 (www.justkannada.in): ಈ ವರ್ಷ ಕ್ರಿಸ್​ಮಸ್​ ಹಬ್ಬಕ್ಕೆ ಪುಷ್ಪ ಬಿಡುಗಡೆ ಆಗಲಿದೆ ಎಂದು ನಟ ಅಲ್ಲು ಅರ್ಜುನ್ ಟ್ವೀಟ್​ ಮಾಡಿದ್ದಾರೆ.

ಹೌದು. ಹೈ-ಬಜೆಟ್​ನ ಸ್ಟಾರ್​ ಸಿನಿಮಾಗಳು ಈಗ ಒಂದೊಂದಾಗಿ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದೆ. ಈ ಸಾಲಿಗೆ ಪುಷ್ಟ ಸೇರಿದೆ.

ಅಲ್ಲು ಅರ್ಜುನ್ ಜತೆ ರಶ್ಮಿಕಾ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಬಹುನಿರೀಕ್ಷಿತ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದರು.

ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸುಕುಮಾರ್​ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ, ಪ್ರಕಾಶ್​ ರೈ, ಫಹಾದ್​ ಫಾಸಿಲ್​, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ.