ವೆಚ್ಚವಾಗದೇ ಉಳಿದಿರುವ ಮಾಜಿ ರಾಜ್ಯಸಭಾ ಸದಸ್ಯರ ಹಣ ಹಾಲಿ ಸದಸ್ಯರಿಗೆ ಹಂಚಿಕೆ; ಕೋವಿಡ್ ನಿರ್ವಹಣೆಗೆ ಬಳಸುವಂತೆ ಮನವಿ…

ಬೆಂಗಳೂರು ಮೇ. 21,2021(www.justkannada.in): ಯೋಜನೆ ಇಲಾಖೆಗೆ ಸಂಬಂಧಿಸಿದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ವೆಚ್ಚವಾಗದೆ ಉಳಿದಿರುವ 2,84,92,608 ರೂಪಾಯಿ ಹಣವನ್ನು ಹಾಲಿ ಸದಸ್ಯರಿಗೆ ಹಂಚಲಾಗಿದೆ. ಈ ಅನುದಾನವನ್ನು ಸದಸ್ಯರು ತುರ್ತಾಗಿ ಕೋವಿಡ್-19 ನಿರ್ವಹಣೆಗೆ ಬಳಸಿಕೊಳ್ಳುವಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದ್ದಾರೆ.jk

ರಾಜ್ಯದಲ್ಲಿ ಹಾಲಿ 12 ಜನ ರಾಜ್ಯಸಭಾ ಸದಸ್ಯರಿದ್ದು ತಲಾ 23,74,384 ರೂ. ಗಳನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಿರುವ ಹಣಕ್ಕೆ ಸದಸ್ಯರು ಆಯಾ ಜಿಲ್ಲಾಧಿಕಾರಿಗಳಿಗೆ ಕ್ರಿಯಾ ಯೋಜನೆ ನೀಡಿ ಬಳಕೆ ಮಾಡಿಕೊಳ್ಳಬೇಕು. ಪ್ರಸ್ತುತ ಕೊರೋನಾ ಎರಡೇ ಅಲೆ ಇರುವ ಕಾರಣ, ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೆರವಾಗುವ ರೀತಿಯಲ್ಲಿ ಸದಸ್ಯರು ಅನುದಾನವನ್ನು ಬಳಸಿದಲ್ಲಿ, ಪ್ರಸ್ತುತ ಇರುವ ಕೊರೋನಾ ಎರಡನೇ ಅಲೆ ನಿಯಂತ್ರಣದ ಜೊತೆಗೆ ಕೊರೋನಾ 3ನೇ ಅಲೆ ಬಂದಲ್ಲಿ, ಅದನ್ನು ಎದುರಿಸಲು ಇನ್ನಷ್ಟು  ಬಲ ಬರಲಿದೆ ಎಂದು ಸಚಿವ ಡಾ. ನಾರಾಯಣಗೌಡ ರಾಜ್ಯಸಭಾ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಸಹ ರಾಜ್ಯ ಸಭಾ ಸದಸ್ಯರು ಈ ಅನುದಾನವನ್ನು ಕೋವಿಡ್-19 ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದೆ.allocation-remaining-former-rajyasabha-members-money-use-covid-maintenance-minister-narayanagowda

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ರಾಜ್ಯಸಭಾ ಸದಸ್ಯರಾದ ಕೆ.ಸಿ. ರಾಮಮೂರ್ತಿ, ನಿರ್ಮಲಾ ಸೀತಾರಾಮನ್, ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ರಾಜೀವ್ ಚಂದ್ರಶೇಖರ, ಕೆ. ನಾರಾಯಣ, ಬಳ್ಳಾರಿ ಜಿಲ್ಲೆಯ ಸೈದ್ ನಾಸಿರ್ ಹುಸೇನ್, ಬೆಳಗಾವಿಯ ಈರಣ್ಣ ಕಡಾಡಿ, ಚಿಕ್ಕಮಗಳೂರಿನ ಜೈರಾಮ್ ರಮೇಶ್, ಹಾಸನದ ಹೆಚ್.ಡಿ. ದೇವೇಗೌಡ, ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಡುಪಿ ಜಿಲ್ಲೆಯ ಆಸ್ಕರ್ ಫರ್ನಾಂಡಿಸ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯಸಭಾ ಸದಸ್ಯರ ಈ ಅನುದಾವನ್ನು ಕೋವಿಡ್-19 ನಿರ್ವಹಣೆಗಾಗಿ ಬಳಸಿಕೊಳ್ಳಬಹುದಾಗಿದೆ.

Key words: Allocation – remaining – former RajyaSabha- members –money- use – covid maintenance-minister-Narayanagowda