ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್‌ ಕೆಲ ಶಾಸಕರ ದುಂಡಾವರ್ತನೆ ನುಂಗಿ ಕೊಂಡಿದ್ದೆ :  ಎಚ್.ಡಿ.ಕೆ

ಬೆಂಗಳೂರು,ಅಕ್ಟೋಬರ್,29,2020(www.justkannada.in) : ಕಾಂಗ್ರೆಸ್‌ ಜೊತೆಗಿನ ಸರಕಾರದ ವೇಳೆ ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್‌ ಶಾಸಕರೊಬ್ಬರು ಮುನಿಸಿ ಕೊಂಡಿದ್ದರು. ಅಷ್ಟು ಕಷ್ಟ  ಪಟ್ಟು ಸಹಿಸಿಕೊಂಡು ಮೈತ್ರಿ ಸರಕಾರದಲ್ಲಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.jk-logo-justkannada-logoಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭ. ಜನ ಕಲ್ಯಾಣವಲ್ಲ

ರಾಜರಾಜೇಶ್ವರಿ ನಗರ ವ್ಯಾಪ್ತಿಯ ಲಕ್ಷ್ಮೀದೇವಿ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕೃಷ್ಣಾದಲ್ಲಿ ಜನರ ಸಮಸ್ಯೆ ಆಲಿಸಿ, ನನ್ನ ಕಚೇರಿಗೆ ಹೋಗಿದ್ದೆ. ಆಗ ನನ್ನ ಕಚೇರಿಗೆ ಬಂದ ಕಾಂಗ್ರೆಸ್‌ ಶಾಸಕರೊಬ್ಬರು ನಿಮಗೆ ಎಷ್ಟು ಹೊತ್ತು ಕಾಯೋದು ಎಂದು ಅವರು ತಂದಿದ್ದ 10-12 ಪತ್ರಗಳನ್ನು ಇಸ್ಪೀಟ್ ಎಲೆಯಂತೆ  ಬಿಸಾಡಿದ  ಘಟನೆಯನ್ನು ನೆನಪಿಸಿಕೊಂಡರು. ಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭ. ಜನ ಕಲ್ಯಾಣವಲ್ಲ ಎಂಬುದನ್ನು ವಿವರಿಸಿದ್ದಾರೆ.

ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ

ಕಾಂಗ್ರೆಸ್ಸಿಗರು ನೀಡಿದ ಕಿರುಕುಳದ ನಡುವೆಯೂ  ರೈತರ ಹಿತ ಕಾಯಲು 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಒಬ್ಬ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು ಎಂದು ಬೇಸರವ್ಯಕ್ತಪಡಿಸಿದರು.

ಮೋದಿ ಎಚ್‌ಎಎಲ್‌ನ್ನು ಮಾರುವುದಕ್ಕೆ ಹೊರಟಿದ್ದಾರೆ

ಇನ್ನು, ಮೋದಿ ಎಚ್‌ಎಎಲ್‌ನ್ನು ಮಾರುವುದಕ್ಕೆ ಹೊರಟಿದ್ದಾರೆ. ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ನೀಡಿದ್ದಾರೆ. ಮುಖೇಶ್‌ ಅಂಬಾನಿ ಆದಾಯ ಗಂಟೆಗೆ 94 ಕೋಟಿ ರೂ. ಇದೆಯಂತೆ. ಅವರ ಸಲಹೆಯನ್ನು ತೆಗೆದುಕೊಂಡು ಪ್ರತಿ ಕುಟುಂಬಕ್ಕೂ ದಿನಕ್ಕೆ ನೂರು ರೂಪಾಯಿ ಬರುವಂತೆ ಮಾಡಬಹುದಲ್ಲ ಎಂದು ಹೇಳಿದರು.

ದುಡ್ಡು ತಂದವರು ಯಾರೋ, ಹೆಸರು ಮಾಡ್ಕೊಂಡಿದ್ದು ಯಾರೋ

ಬೆಂಗಳೂರು ನಗರದ ಅಭಿವೃದ್ಧಿಗೆ ದುಡ್ಡು ತಂದವರು ಯಾರೋ, ಹೆಸರು ಮಾಡ್ಕೊಂಡಿದ್ದು ಯಾರೋ, ಐಟಿ ಸೆಕ್ಟರ್ ಗೆ ಹೊಸ ಆಯಾಮವನ್ನ ನೀಡಿದ್ದು ದೇವೇಗೌಡರು. ದೇವೇಗೌಡ ಸ್ಕೀಮ್ ಅಂತ ದಕ್ಷಿಣ ಆಫ್ರಿಕಾದಲ್ಲಿ ಆಕ್ಸಲರೆಟೆಡ್‌ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. 1988ರಲ್ಲಿ ನಂದಿನಿ‌ ಬಡಾವಣೆಯನ್ನು ಒಡಿಬೇಕು ಎಂಬ ಆದೇಶ ಬಂದಾಗ ನಿಮ್ಮ ನೆರವಿಗೆ ಬಂದಿದ್ದು ದೇವೇಗೌಡರು. ಬೆಂಗಳೂರಲ್ಲಿ ಮೆಟ್ರೋ ಪ್ರಾರಂಭ ಮಾಡಿದ್ದು ನಾನು ಎಂದರು.alliance-government-Some-Congress-Roundup-legislators-Swallowed-HDK

ಹನುಮಂತರಾಯಪ್ಪ ಒಬ್ಬ ಸಮಯ ಸಾಧಕ

ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಈ ಕ್ಷೇತ್ರದ ಮನೆ ಮಗ ನಾನು. ಹನುಮಂತರಾಯಪ್ಪ  ಒಬ್ಬ ಒಕ್ಕಲಿಗನಿಗೆ ಒಳಿತನ್ನು ಮಾಡಿಲ್ಲ. ಅವರು ಒಬ್ಬ ಸಮಯ ಸಾಧಕ. ಕಾಂಗ್ರೆಸ್‌ನವರು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಇವತ್ತು ಕೊರೊನಾದಿಂದ ಜನ ಬೀದಿಯಲ್ಲೇ ಸಾಯುತ್ತಿದ್ದಾರೆ. ಕುಮಾರಣ್ಣನವರು ಅಧಿಕಾರದಲ್ಲಿದ್ದಿದ್ರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ಈ ಸಂದರ್ಭದಲ್ಲಿ ಮಳವಳ್ಳಿ ಶಾಸಕ ಅನ್ನದಾನಿ, ಪರಿಷತ್‌ ಸದಸ್ಯ ರಮೇಶ್‌ ಗೌಡ, ಬೆಂಗಳೂರು ನಗರ ಜೆಡಿಎಸ್‌ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಆರ್‌ಆರ್‌ ನಗರದ ಜೆಡಿಎಸ್‌ ಅಧ್ಯಕ್ಷ ಆರ್‌.ಚನ್ನಕೇಶವಮೂರ್ತಿ ಮತ್ತು ಅನೇಕ ಮುಖಂಡರು ಇದ್ದರು.

key words : alliance-government-Some-Congress-Roundup-legislators-Swallowed-HDK