ತೆರೆ ಮೇಲೆ ಗ್ರ್ಯಾಂಡ್ ಮಾಸ್ಟರ್ ಆಗಲಿದ್ದಾರೆ ಅಮೀರ್ ಖಾನ್

ಬೆಂಗಳೂರು, ಫೆಬ್ರವರಿ 12, 2021 (www.justkannada.in): ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಬಯೋಪಿಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ  ಅಮೀರ್ ಖಾನ್ ಹೆಸರು ಕೇಳಿಬರುತ್ತಿದೆ.

ಹೌದು. ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಅವರ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಜ್ಜಾಗಿದೆ. ಈ ಮೊದಲು ಚಿತ್ರಕ್ಕೆ ಅಭಿಷೇಕ್ ಬಚ್ಚನ್ ಹೆಸರು ಕೇಳಿಬರುತ್ತಿತ್ತು. ಆದರೀಗ ಅಮೀರ್ ಖಾನ್ ನಟಿಸುವ ಸಾಧ್ಯತೆ ಇದೆ.

ನಿರ್ದೇಶಕ ಆನಂದ್ ಎಲ್ ರೈ ಮತ್ತು ಮಹವೀರ್ ಜೈನ್ ನಿರ್ಮಾಣದಲ್ಲಿ ಈ ಬಯೋಪಿಕ್ ಮೂಡಿಬರುತ್ತಿದೆ.

ಈ ಬಗ್ಗೆ ನಿರ್ಮಾಪಕ ಮಹಾವೀರ್ ಜೈನ್ ಮಾತನಾಡಿದ್ದು, ಈಗಾಗಲೇ ಚಿತ್ರದ ಕೆಲಸಗಳು ಪ್ರಾರಂಭವಾಗಿದ್ದು, 2022ರಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ.