ಕೇಂದ್ರ ಸರಕಾರದಿಂದ ತಾರತಮ್ಯ ಆರೋಪ: ನೀತಿ ಆಯೋಗದ ಸಭೆ ಬಹಿಷ್ಕರಿಸಿದ ತೆಲಂಗಾಣ ಸಿಎಂ

ಬೆಂಗಳೂರು, ಆಗಸ್ಟ್ 07, 2022 (www.justkannada.in): ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಬಹಿಷ್ಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ನೀತಿ ಆಯೋಗದ ಆಡಳಿತ ಮಂಡಳಿಯ ಏಳನೇ ಸಭೆಯ ನಡೆಯಲಿದೆ.

ಜುಲೈ 2019 ರಿಂದ ಇದೇ ಮೊದಲ ಬಾರಿಗೆ ಆಡಳಿತ ಮಂಡಳಿಯ ವೈಯಕ್ತಿಕ ಸಭೆ ನಡೆಯುತ್ತಿದೆ. ಸಭೆ ಬಹಿಷ್ಕರಿಸಿರುವ ಚಂದ್ರಶೇಖರ ರಾವ್ ಈ ಕುರಿತು ಮೋದಿಗೆ ಪತ್ರ ಬರೆದಿದ್ದಾರೆ.

ರಾಜ್ಯಗಳ ವಿರುದ್ಧ ತಾರತಮ್ಯ ಮಾಡುವ ಕೇಂದ್ರ ಸರ್ಕಾರದ ಪ್ರಸ್ತುತ ಪ್ರವೃತ್ತಿಯ ವಿರುದ್ಧ ತೀವ್ರ ಪ್ರತಿಭಟನೆಯ ಸಂಕೇತವಾಗಿ ನಾನು ಅದರಿಂದ ದೂರವಿದ್ದೇನೆ.  NITI ಆಯೋದ ಸಭೆಗೆ ಹಾಜರಾಗುವುದರಿಂದ ನಮ್ಮ ಉಪಯುಕ್ತವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.