Thursday, September 17, 2026

BDA Apartments

ಪಠ್ಯದಲ್ಲಿ ಬಸವಣ್ಣ ಬಗ್ಗೆ ತಪ್ಪು ಮಾಹಿತಿ ಆರೋಪ: ಸರ್ಕಾರದ ವಿರುದ್ಧ ಜಯಮೃತ್ಯ...
Home Front Page ಪಠ್ಯದಲ್ಲಿ ಬಸವಣ್ಣ ಬಗ್ಗೆ ತಪ್ಪು ಮಾಹಿತಿ ಆರೋಪ: ಸರ್ಕಾರದ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ.

ಪಠ್ಯದಲ್ಲಿ ಬಸವಣ್ಣ ಬಗ್ಗೆ ತಪ್ಪು ಮಾಹಿತಿ ಆರೋಪ: ಸರ್ಕಾರದ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ.

ಹುಬ್ಬಳ್ಳಿ,ಮೇ,31,2022(www.justkannada.in):  ಶಾಲಾ ಪಠ್ಯದಲ್ಲಿ ಜಗಜ್ಯೋತಿ ಬಸವಣ್ಣ ಅವರ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿಗಳು, ಬಸವಣ್ಣನವರ ಉದ್ದೇಶವನ್ನ ದಾರಿ ತಪ್ಪಿಸಲಾಗುತ್ತಿದೆ. ಬಸವಣ್ಣ ಸಿದ್ದಾಂತಕ್ಕೆ  ಅಪಚಾರವಾದ್ರೆ ಸಹಿಸಲ್ಲ.   ಕರ್ನಾಟಕದ ಆತ್ಮ ಬಸವಣ್ಣ, ಪ್ರಾಣ ಕುವೆಂಪು. ಬಸವಣ್ಣ  ಮತ್ತು ಕುವೆಂಪು ಅವರ ತತ್ವಕ್ಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಠ್ಯದಲ್ಲಿ ಬಸವಣ್ಣ ಬಗ್ಗೆ ತಪ್ಪು ಮಾಹಿತಿ ಆರೋಪ basava jaya

ಪಠ್ಯ ಪುಸ್ತಕದಲ್ಲಿನಲೋಪ ಸರಿಪಡಿಸಬೇಕು.  ಸಿಎಂ ಬೊಮ್ಮಾಯಿಗೆ ಶಾಶ್ವತ ಅಧಿಕಾರ ವಿಲ್ಲ  ಬಸವಣ್ಣ ತತ್ವಕ್ಕೆ ಅಪಪ್ರಚಾರವಾದಾಗ ಮೌನವಾಗಿರಬೇಡಿ. ಅಧಿಕಾರಕ್ಕಾಗಿ ಮೌನವಾಗಿರಲು ಪ್ರಯತ್ನಿಸಬೇಡಿ.  ಇದು ಬಸವಭಕ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹರಿಹಾಯ್ದರು.

Key words: Allegedly-false-information-about-Basavanna-basava jayamruthyunjaya Swamiji