ರಾಜ್ಯಸಭೆ ಚುನಾವಣೆ 3ನೇ ಸ್ಥಾನಕ್ಕೆ ಬಿಗ್ ಫೈಟ್: ನಾವೇನು ಅಡ್ಡಮತಗಳಿಗೆ ಪ್ರಯತ್ನ ಮಾಡಲ್ಲ ಎಂದ ಸಚಿವ ಆರ್.ಅಶೋಕ್.

ಬೆಂಗಳೂರು,ಮೇ,31,2022(www.justkannada.in):  ರಾಜ್ಯಸಭಾ ಚುನಾವಣಾ ಕಣ ರಂಗೇರಿದ್ದು ಇಂದು ನಾಮಪತ್ರ ಸಲ್ಲಿಕೆಗೆ ಡೆಯ ದಿನವಾಗಿದೆ. ಈ ಮಧ್ಯೆ 3ನೇ ಸ್ಥಾನಕ್ಕೆ ಬಿಗ್ ಫೈಟ್ ಎದುರಾಗಿದೆ.

ರಾಜ್ಯದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ 2ನೇ ಅಭ್ಯರ್ಥಿ ಹಾಗೂ ಬಿಜೆಪಿ 3ನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಈ ಮಧ್ಯೆ ಇನ್ನೂ ಜೆಡಿಎಸ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ 3ನೇ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಎದುರಾಗಿದೆ.

ಈ ಕುರಿತು ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ನಾವೇನು ಅಡ್ಡಮತಗಳಿಗೆ ಪ್ರಯತ್ನ ಮಾಡಲ್ಲ.  ಅಡ್ಡ ಮತಗಳನ್ನ ಮಾಡುವ ಸಾಧ್ಯತೆ ಕಾಣ್ತಿದೆ.  4ನೇ ಸೀಟ್ ಯಾರಾದ್ರೂ ಗೆಲ್ಲಬೇಕಲ್ಲ.  ಲೇಹರ್ ಸಿಂಗ್ ಗೆಲ್ಲಿಸುವ ಕಸರತ್ತು ಮಾಡುತ್ತೇವೆ.   2ನೇ ಪ್ರಾಶಸ್ತ್ಯದ ಮತ ನಮಗೆ ಹೆಚ್ಚಾಗಿದ್ದು,  ಯಾರಿಗೆ ನಷ್ಟ  ಅಂತಾ ಜಗತ್ತಿಗೆ ಗೊತ್ತಾಗುತ್ತದೆ.   ಜೆಡಿಎಸ್ ಯಾರಿಗೆ ಬೆಂಬಲಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ ಎಂದರು.

Key words: Big Fight – Rajya Sabha –polls-minister-R. Ashok