ಉಗ್ರ ಚಟುವಟಿಕೆಗಳಲ್ಲಿ ಭಾಗಿ ಆರೋಪ: ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧಿಸಿದ ಎನ್ ಐಎ.

ಮಂಗಳೂರು,ಜನವರಿ,5,2023(www.justkannada.in): ಉಗ್ರಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನ ಎನ್ ಐಎ ಬಂಧಿಸಿದೆ.

ಉಡುಪಿ ಮೂಲದ ವಿದ್ಯಾರ್ಥಿ ರಿಹಾನ್ ಶೇಖ್ ಬಂಧಿತ ವಿದ್ಯಾರ್ಥಿ.  ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಉಗ್ರ ಚಟುವಟಿಕೆಯಲ್ಲಿ ಬಾಕಿಯಾಗಿರುವ ಆರೋಪ ಕೇಳಿ ಬಂದಿದೆ. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನ ಎನ್ ಐಎ ಚುರುಕುಗೊಳಿಸಿದೆ.

ಇಂದು ಪಿಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ  ಎನ್ ಐ ದಾಳಿ ಮಾಡಿದ್ದು, ಕಾಲೇಜಿನ ವಿದ್ಯಾರ್ಥಿ   ವಿದ್ಯಾರ್ಥಿ ರಿಹಾನ್ ಶೇಖ್ ಬಂಧಿಸಿದೆ ಎನ್ನಲಾಗುತ್ತಿದೆ.   ಇದೇ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡಿದ್ದ ಮಾಜ್ ಮುನೀರ್ ಎಂಬಾತನನ್ನ ಶಿವಮೊಗ್ಗ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದರು.

Key words: Alleged-Engineering- student -arrested -NIA.