ಅನುದಾನ ತಾರತಮ್ಯ ಆರೋಪ: ಕಾಂಗ್ರೆಸ್ ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು.

ನವದೆಹಲಿ,ಫೆಬ್ರವರಿ,7,2024(www.justkannada.in):  ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಸಿದ ರಾಜ್ಯ ಕಾಂಗ್ರೆಸ್ ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕಕ್ಕೆ ಯಾವುದೇ ಹಣ ನೀಡುವುದು ಬಾಕಿಯಿಲ್ಲ. ಕರ್ನಾಟಕದ ಜಿಎಸ್ ಟಿಯ ಒಂದು ಪೈಸೆಯನ್ನೂ ಉಳಿಸಿಕೊಂಡಿಲ್ಲ.  ತೆರಿಗೆ ನೀಡಿಲ್ಲವೆಂದು ಜಾಹೀರಾತಿಗೆ ಕಾಂಗ್ರಸ್ ಸರ್ಕಾರ ಕೋಟ್ಯಾಂತರ ರೂ. ಖರ್ಚುಮಾಡಿದೆ ಸರ್ಕಾರ ಜಾಹೀರಾತಿನಲ್ಲಿ ಸುಳ್ಳು ಹೇಳಿದೆ.  ಇದು ಕಾಂಗ್ರೆಸ್ ನಾಯಕರ ಹೇಳಿಕೆ ಕುಚೇಷ್ಟೆಯಿಂದ ಕೂಡಿದೆ. ಸಿಎಂ ಹೇಳಿತ್ತಿರುವುದು ರಾಜಕೀಯ ಪ್ರೇರಿತ ಮಾತು ಎಂದು ಟೀಕಿಸಿದರು.

ಹಣಕಾಸು ಆಯೋಗ ನೀಡಿರುವ ಮಾಹಿತಿ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಹಣಕಾಸು ಆಯೋಗದ ಶಿಫಾರಸ್ಸಿನಂತೆ ಹಣ ಹಂಚಿಕೆ ಮಾಡಲಾಗಿದೆ. ಜಿಎಸ್ ಟಿ ಬಾಕಿ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕಕ್ಕೆ ತಾರತಮ್ಯ ಅನ್ನೋದು ತಪ್ಪು ಮಾಹಿತಿ. ಗ್ಯಾರಂಟಿಗಳಿಂದ ಕರ್ನಾಟಕ ಸರ್ಕಾರ ಬರಿದಾಗಿದೆ.  ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಟಾಂಗ್ ನೀಡಿದರು.

ರಾಜ್ಯಗಳಿಗೆ ಹಣ ಹಂಚಿಕೆ ನೇರ ತೆರಿಗೆ ರೂಪದಲ್ಲಿ ಬರುತ್ತೆ. ಅನುದಾನ ಹಂಚಿಕೆ ಹಣಕಾಸು ಆಯೋಗದ ವರದಿಯ ಮೇಲೆ ನಿರ್ಧಾರವಾಗಲಿದೆ. ಜಿಎಸ್‌ಟಿಯಲ್ಲಿ(GSt) ಎಸ್‌ಜಿಎಸ್‌ಟಿ ಸಂಪೂರ್ಣವಾಗಿ ರಾಜ್ಯಕ್ಕೆ ಹೋಗುತ್ತೆ. ಯಾವ ರಾಜ್ಯಕ್ಕೆ ಎಷ್ಟು ಹಣ ಎಂದು ಹಣಕಾಸು ಆಯೋಗ ನಿರ್ಧರಿಸುತ್ತೆ. ಹಣ ಬಿಡುಗಡೆ ವಿಚಾರದಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ. ನನಗೆ ಇಷ್ಟವಿರುವ ರಾಜ್ಯಕ್ಕೆ ಹಣ ಬಿಡುಗಡೆ ಅಧಿಕಾರ ನನಗಿಲ್ಲ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

Key words: Allegation -grant –discrimination-Union Minister- Nirmala Sitharaman – Congress