ಅನುದಾನ ತಾರತಮ್ಯ ಆರೋಪ: ಕೇಂದ್ರದ ಸಾಧನೆ ಹಂಚಿಕೊಂಡು ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ತಿರುಗೇಟು.

ಮೈಸೂರು,ಫೆಬ್ರವರಿ,10,2024(www.justkannada.in):  ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರದ ಸಾಧನೆಗಳನ್ನ ಸಾಮಾಜಿಕ ಜಾಲತಾಣ  ಟ್ವಿಟ್ಟರ್ ನಲ್ಲಿ ಅಂಕಿ ಅಂಶ ಸಮೇತ ಉತ್ತರ ನೀಡಿ ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಮುಂಚೆ ಇದ್ದ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರತಾಪ್ ಸಿಂಹ, 2014ರವರೆಗೆ ಇದ್ದ DBT ಫಲಾನುಭವಿಗಳ ಸಂಖ್ಯೆ, ವಿದ್ಯುದ್ದಿಕರಣ ಸ್ಥಿತಿ, ಮೆಡಿಕಲ್ ಸೀಟುಗಳು ಮತ್ತು ವೈದ್ಯಕೀಯ ಕಾಲೇಜುಗಳು ಮೋದಿ ಸರ್ಕಾರದ ಅವಧಿಯಲ್ಲಿ ವೃದ್ಧಿಗೊಂಡಿರುವುದು. ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗೆ ಮತ್ತು ಜನಪರ ಕಾಳಜಿಗೆ ನೀಡಿದ ಆದ್ಯತೆ ತೋರಿಸುತ್ತದೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಅದಕ್ಕೂ ಮುಂಚೆ ಇದ್ದ ಸ್ಥಿತಿಗತಿಗಳ ಬಗ್ಗೆ ಶ್ವೇತ ಪತ್ರ ತಿಳಿಸುತ್ತದೆ. 2014 ರ ಮೊದಲು ವಿಮಾನ ನಿಲ್ದಾಣಗಳು, ಎಲ್ ಪಿಜಿ, ಪಿಎನ್ ಜಿ ಸಂಪರ್ಕ,  ಗ್ರಾಮೀಣ ಭಾಗದಲ್ಲಿ ದೊರೆಯುತ್ತಿದ್ದ ವಿದ್ಯುತ್ ಪ್ರಮಾಣ ಸಂಖ್ಯೆಗಳೇ ಹೇಳುತ್ತಿವೆ ಮೋದಿ ಸರ್ಕಾರದಡಿ ಆದ ಪರಿವರ್ತನೆಯನ್ನ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Key words: Allegation – grant- discrimination-achievements – Center- Pratap Simha