Monday, October 5, 2026

BDA Apartments

ಬಿ.ಎಸ್.ವೈ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತ : ರಾಜ್ಯ ಕಾಂಗ್ರೆಸ್ ಟೀಕೆ BDA J...
Home Cinema ಸರ್ಜಾ ಕುಟುಂಬದಲ್ಲಿ ವಿವಾಹ ಕಳೆ: ಹಸೆಮಣೆ ಏರಲು ಸಜ್ಜಾದ ಧ್ರುವ

ಸರ್ಜಾ ಕುಟುಂಬದಲ್ಲಿ ವಿವಾಹ ಕಳೆ: ಹಸೆಮಣೆ ಏರಲು ಸಜ್ಜಾದ ಧ್ರುವ

ಬೆಂಗಳೂರು, ನವೆಂಬರ್ 21, 2019 (www.justkannada.in): ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‍ ಮದುವೆ ನವೆಂಬರ್ 23, 24 ರಂದು ನಡೆಯಲಿದ್ದು 25 ರಂದು ಆರತಕ್ಷತೆಯನ್ನು ಸರ್ಜಾ ಕುಟುಂಬದವರು ಹಮ್ಮಿಕೊಂಡಿದ್ದಾರೆ.

ನವೆಂಬರ್ 23ರ ಶನಿವಾರಂದು ದೇವತಾಕಾರ್ಯ. 24ರ ಭಾನುವಾರ ಬೆಳಿಗ್ಗೆ 7.15 ರಿಂದ 7.45ರವರೆಗೆ ಮದುವೆ ಮುಹೂರ್ತ. ಅದೇ ಸಂಜೆ ಆರತಕ್ಷತೆ. ಕನ್ನಡ, ತಮಿಳು, ತೆಲುಗು ಚಿತ್ರರಂಗದ ಹಲವು ಗಣ್ಯರು ಮದುವೆಗೆ ಬರುವ ನಿರೀಕ್ಷೆ ಇದೆ.

ಈ ಮೂಲಕ ಸರ್ಜಾ ಕುಟುಂಬದಲ್ಲಿ ಮತ್ತೆ ವಿವಾಹ ಕಳೆ ಕಟ್ಟಿದೆ, ಅದು ಆಯಕ್ಷನ್ ಪ್ರಿನ್ಸ್ ಧ್ರುವಸರ್ಜಾರ ಮದುವೆಯ ಸುಗ್ಗಿ. ಇಡೀ ಮದುವೆಯ ಸಂಭ್ರಮದ ಜವಾಬ್ದಾರಿಯನ್ನು ಹೊತ್ತಿರುವುದು ಧ್ರುವ ಮಾವ ಹಾಗೂ ನಟ ಅರ್ಜುನ್‍ಸರ್ಜಾ.