Thursday, September 24, 2026

BDA Apartments

Home Cinema ಮತ್ತೆ ತೆರೆ ಮೇಲೆ ಮೋಡಿ ಮಾಡಲಿದ್ದಾರೆ ಐಶ್ವರ್ಯ-ಮಣಿರತ್ನಂ !

ಮತ್ತೆ ತೆರೆ ಮೇಲೆ ಮೋಡಿ ಮಾಡಲಿದ್ದಾರೆ ಐಶ್ವರ್ಯ-ಮಣಿರತ್ನಂ !

ಚೆನ್ನೈ, ಮೇ 25, 2019 (www.justkannada.in): ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಮಣಿರತ್ನಂ ಮತ್ತೆ ಒಂದಾಗಿದ್ದಾರೆ.

ಇತ್ತೀಚೆಗೆ ಐಶ್ವರ್ಯಾ ಮಣಿರತ್ನಂ ಚಿತ್ರಕ್ಕೆ ಸಹಿ ಹಾಕಿದ್ದಾರೆಂಬ ವದಂತಿಗಳು ಇದ್ದವು. ಮಣಿರತ್ನಂ ಚಿತ್ರವು ನಡೆಯುತ್ತಿದೆ ಎಂದು ಈಗ ಅಧಿಕೃತವಾಗಿ ಐಶ್ವರ್ಯ ದೃಢಪಡಿಸಿದ್ದಾರೆ.

ಮಣಿ ಜೊತೆ ಕೆಲಸ ಮಾಡಲು ಸಂತೋಷ ಎಂದು ಕ್ಯಾನೆಸ್ 2019 ರ ಸಂದರ್ಭದಲ್ಲಿ ರೆಡ್ ಕಾರ್ಪೆಟ್ ಸಂವಾದದಲ್ಲಿ ಹೇಳಿದ್ದು, ಮಣಿರತ್ನಂ ಸ್ವತಃ ಘೋಷಿಸದಿದ್ದರೂ ಚಿತ್ರದ ಬಗ್ಗೆ ಮಾತಿಕತೆಯಲ್ಲಿದೆ ಎಂಬುದಾಗಿ ತಿಳಿಸಿದ್ದಾರೆ.