Saturday, August 8, 2026

BDA Apartments

Home Front Page ಹೆಣ್ಣುಮರಿಗೆ ಜನ್ಮ ನೀಡಿದ ಐಶ್ವರ್ಯ ಆನೆ.

ಹೆಣ್ಣುಮರಿಗೆ ಜನ್ಮ ನೀಡಿದ ಐಶ್ವರ್ಯ ಆನೆ.

ಗುಂಡ್ಲುಪೇಟೆ,ಆಗಸ್ಟ್,11,2023(www.justkannada.in): ಬಂಡಿಪುರದ ರಾಂಪುರ ಆನೆ ಶಿಬಿರದಲ್ಲಿ 13 ವರ್ಷದ ಐಶ್ವರ್ಯ ಆನೆ ಹೆಣ್ಣು ಆನೆಮರಿಗೆ ಜನ್ಮ ನೀಡಿದೆ.

ದಸರಾ ಜಂಬೂ ಸವಾರಿಗೂ ಮುನ್ನ ಜನ್ಮ ನೀಡಿದ ಐಶ್ವರ್ಯ ಆನೆ ಮರಿಗೆ ಜನ್ಮ ನೀಡಿದ್ದು ಸದ್ಯ ತಾಯಿ ಆನೆ ಮತ್ತು ಮರಿ ಆರೋಗ್ಯದಿಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ದಸರಾ ಜಂಬೂಸವಾರಿಗೆ ಆಗಮಿಸಿದ್ದ ಲಕ್ಷ್ಮಿ ಎಂಬ ಆನೆ  ಅರಮನೆಯಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು. ಈ ಬಾರಿ ಗರ್ಭಧಾರಣೆಯ ಪರೀಕ್ಷೆ ನಡೆಸಿದ ಬಳಿಕ ದಸರಾ ಮಹೋತ್ಸವಕ್ಕೆ ಪಾಲ್ಗೊಳ್ಳಲು ಸಿಬ್ಬಂದಿ ಆನೆಗಳ ಆಯ್ಕೆ ಮಾಡಿದ್ದಾರೆ.

ಇನ್ನು ಸದ್ಯ ತಾಯಿ ಆನೆ ಐಶ್ವರ್ಯ ಮತ್ತು ಮರಿಯಾನೆ ಲವಲವಿಕೆಯಿಂದ ಇವೆ. ಕಾವಾಡಿ ಮತ್ತು ಮಾವುತರು ತಾಯಿ ಆನೆ ಮತ್ತು ಮರಿಯಾನೆಯನ್ನ ತೀವ್ರ ನಿಗಾ ಇಟ್ಟು ನೋಡಿಕೊಳ್ಳುತ್ತಿದ್ದಾರೆ.

Key words: Aishwarya elephant- gave birth – baby elephant