Friday, August 14, 2026

BDA Apartments

Home Front Page ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ: ಸೋನಿಯಾಗಾಂಧಿ ಸೇರಿ ಹಲವು ನಾಯಕರಿಂದ ಮತದಾನ.

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ: ಸೋನಿಯಾಗಾಂಧಿ ಸೇರಿ ಹಲವು ನಾಯಕರಿಂದ ಮತದಾನ.

ನವದೆಹಲಿ, ಅಕ್ಟೋಬರ್,17,2022(www.justkannada.in) ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಹಲವು ನಾಯಕರು ಮತದಾನ ಮಾಡಿದರು.

ಸೋನಿಯಾ ಗಾಂಧಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಜೊತೆ ಪಕ್ಷದ ಕಚೇರಿಗೆ ಆಗಮಿಸಿ ಮತ ಚಲಾಸಿದರು.  ಬಳಿಕ ಮಾತನಾಡಿದ ಸೋನಿಯಾ ಗಾಂಧಿ, ಈ ದಿನಕ್ಕಾಗಿ ನಾನು ಸುದೀರ್ಘ ಸಮಯ ಕಾಯುತ್ತಿದ್ದೆ ಎಂದು  ಹೇಳಿದರು.

ಇನ್ನು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್, ಅನೇಕರು ಮತದಾನ ಚಲಾಯಿಸಿದರು. ರಾಜ್ಯದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಮತ ಸೇರಿ ಹಲವರು ಮತ ಚಲಾಯಿಸಿದರು.

Key words: AICC -President- Election- Sonia Gandhi -voting