ಕೃಷಿ ಸಚಿವರು ನಾಪತ್ತೆ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ- ಬಡಗಲಪುರ ನಾಗೇಂದ್ರ ಘೋಷಣೆ.

ಮೈಸೂರು,ಜೂನ್,7,2021(www.justkannada.in): ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಣೆ ಮಾಡಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ರೈತನಾಯಕ ಬಡಗಲಪುರ ನಾಗೇಂದ್ರ, ಲಾಕ್ ಡೌನ್ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದೆ. ಕೃಷಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಎಲ್ಲಾ ಕಡೆ ಬಂದು ಹೋದ್ರು. ಈಗ ಕೃಷಿ ಸಚಿವ ಬಿ.ಸಿ ಪಾಟೀಲ್ ಪತ್ತೆನೇ ಇಲ್ಲಾ. ದಯಮಾಡಿ ಹುಡುಕಿಕೊಟ್ಟು, ರೈತರಿಂದ ಸೂಕ್ತ ಬಹುಮಾನ ಪಡೆಯಿರಿ ಎಂದರು.

ಸರ್ಕಾರದಿಂದ ಎಲ್ಲಾ ರೀತಿಯಾದ ಪ್ಯಾಕೇಜ್ ಸಿಕ್ತಿದೆ. ಆದ್ರೆ ರೈತರಿಗೆ ಯಾವುದೇ ಅನುಕೂಲವಿಲ್ಲ. ಉತ್ತರ ಭಾಗದಲ್ಲಿ ಈಗ ಮುಂಗಾರು ಶುರುವಾಗಿದೆ. ನಮಗೆ ಏಪ್ರಿಲ್ ಕೊನೆಯಲ್ಲಿ ಮುಂಗಾರು ಆಗುತ್ತೆ. ಮೈಸೂರು ಜಿಲ್ಲೆಯಲ್ಲಿ 2.27 ಲಕ್ಷ ಎಕರೆಯಷ್ಟು ಕಾಟನ್ ಬೆಳಿತಿದ್ದವು. ಮುಸುಕಿನ ಜೋಳ ಬೆಳಿತಿದ್ವು ಇದೆಲ್ಲವೂ ಕಡಿಮೆಯಾಗಿದೆ. ನಮಗೆ ಬಿತ್ತನೆ ಬೀಜ, ಗೊಬ್ಬರದ, ಕೀಟನಾಶಕಗಳ ಕೊರತೆ ಹೆಚ್ಚಾಗಿದೆ. ರಾಜ್ಯದ 12 ಜಿಲ್ಲೆಯಲ್ಲಿ ಲಕ್ಷಾಂತರ ಎಕೆರೆಯಲ್ಲಿ ಮುಸುಕಿನ ಜೋಳ ಬೆಳೆಯುತ್ತವೆ. ಆದ್ರೀಗ ಬಿತ್ತನೆ ಬೀಜದ ಕೊರತೆಯಾಗಿದೆ. ಕಳಪೆ ಬಿತ್ತನೆ ಬೀಜದಿಂದ ಬೆಳೆ ಸರಿಯಾಗಿ ಬಂದಿಲ್ಲ. ಲಾಕ್ಡೌನ್ ಕಾರಣದಿಂದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳು ಬಂದಿಲ್ಲ ಅಂತಾರೆ. ಸರ್ಕಾರ ರೈತರಿಗೆ ಯಾವುದೇ ಸೌಲಭ್ಯ ನೀಡ್ತಿಲ್ಲ. ಈಗಾಗಲೇ ರಸಗೊಬ್ಬರದ ಬೆಲೆ ಹೆಚ್ಚಾಗಿದೆ. ಕೆಲವು ಭಾಗದಲ್ಲಿ ಹಳೆ ಸ್ಟಾಕ್‌ ನ್ನ ಹೊಸ ರೇಟ್‌ಗೆ ಮಾರಾಟ ಮಾಡ್ತಿದ್ದಾರೆ ಎಂದು ಬಡಗಲಪುರ ನಾಗೇಂದ್ರ ಆರೋಪಿಸಿದರು.

ಲಾಕ್ ಡೌನ್‌ನಿಂದ ಸರ್ಕಾರಕ್ಕೆ ಭಾರಿ ನಷ್ಟವಾಗಿದೆ ಅಂತಾರೆ. ರಾಜ್ಯದಲ್ಲಿ ರೈತರಿಗೆ 1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ. ನಾವು ಯಾರಿಗೆ ಕೇಳೋದು…? ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳ ಕೊರತೆಯ ಜೊತೆಗೆ ನಕಲಿ ಬೀಜದ ಹಾವಳಿ ಹೆಚ್ಚಾಗಿದೆ. ಈ ಸಂಬಂಧ ಸರ್ಕಾರ ಸಭೆ ನಡೆಸಬೇಕು. ರೈತರಿಗೆ ಸಹಕಾರ ನೀಡಬೇಕು. ನಷ್ಟ ಅನುಭವಿಸಿರುವ ರೈತರಿಗೆ ಸಹಾಯ ಮಾಡಬೇಕು. ಕೃಷಿ ಸಾಲ ನೀಡುವುದು, ಈಗ ಸಾಲ ಪಡೆದು ಸಂಕಷ್ಟದಲದಲಿರುವ ರೈತರಿಗೆ ಸಹಕಾರ ನೀಡಬೇಕು ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ನೀಡಲು ಸಿದ್ದ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ, ಅಭಿವೃದ್ಧಿ ಶೂನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತ ಸಮಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಯಾಗಿದ್ದು ಬೇಸರ. ಈಗ ಯಡಿಯೂರಪ್ಪರಿಗೆ ಪಕ್ಷದಲ್ಲಿ ಹಿಡಿತ ಇಲ್ಲ. ಅದು ವಯಸ್ಸಿನ ಕಾರಣ ಇರಬಹುದು, ಅಥವಾ ಪಕ್ಷದಲ್ಲಿ ಹಿಡಿತವಿಲ್ಲದಿರಬಹುದು. ಆದ್ರೆ ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ನೀಡುತ್ತಾರೆ ಅಂದರೆ ಇವ್ರು ಅಸಮರ್ಥರು ಎಂದು ಟೀಕಿಸಿದರು.

ರೈತರ ಸಮಸ್ಯೆಗಳನ್ನ ಕೇಳ್ತಿದ್ರು, ಆದ್ರೆ ಒಂದೂ ಸಮಸ್ಯೆಗೂ ಪರಿಹಾರ ಸಿಗ್ತಿರ್ಲಿಲ್ಲ. ವೈಯಕ್ತಿಕವಾಗಿ ಯಡಿಯೂರಪ್ಪರ ಮೇಲೆ ಗೌರವವಿದೆ. ಆದ್ರೆ ಆಡಳಿತದಲ್ಲಿ ಯಡಿಯೂರಪ್ಪ ಸಾಧನೆ ಶೂನ್ಯ. ಬಿಜೆಪಯಲ್ಲಿ ಯಾರೇ ಅಧಿಕಾರದಲ್ಲಿದ್ದರೂ, ಅದು ರೈತರಿಗೆ ಪ್ರಯೋಜನವಿಲ್ಲ ಎಂದು  ರೈತ ನಾಯಕ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

Key words: Agriculture  Minister –lost- find-worthy reward –farmer leader-Badagalapur Nagendra