ಆಹಾರ ಧಾನ್ಯಗಳ ಉತ್ಪಾದನೆ, ಬಿತ್ತನೇ ಬೀಜ, ಬೆಳೆ ಸಮೀಕ್ಷೆ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ಬಿ.ಸಿ ಪಾಟೀಲ್.

ಬೆಂಗಳೂರು,ಜೂನ್,14,2021(www.justkannada.in): 2020-21 ನೇ ಸಾಲಿನಲ್ಲಿ 153.08 ಲಕ್ಷ ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ. ದೇಶದ ಸರಾಸರಿಗೆ ಹೋಲಿಸಿದರೆ ಶೇ. 2 ರಷ್ಟು ಹಾಗೂ ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇ. 10 ರಷ್ಟು ಹೆಚ್ಚಿನ‌ ಉತ್ಪಾದನೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.jk

ಮಾಧ್ಯಮಗಳ ಜತೆ ಮಾತನಾಡಿ ಮಾಹಿತಿ ನೀಡಿದ ಸಚಿವ ಬಿ.ಸಿ ಪಾಟೀಲ್, ಮುಂಗಾರು ಹಂಗಾಮಿನ ಬಿತ್ತನೆ ಗುರಿ 77 ಲಕ್ಷ ಹೆಕ್ಟೇರ್ ಗುರಿ ಇದೆ. ಶೇಖಡಾವಾರು ಬಿತ್ತನೆ 15.23 ಶೇ ಆಗಿದೆ.  ಬಿತ್ತನೆ ಬೀಜದ ಬೇಡಿಕೆ 60 ಲಕ್ಷ ಕ್ವಿಂಟಾಲ್  ಇದೆ. ಆದರೆ ಲಭ್ಯತೆ 7.74 ಲಕ್ಷ ಕ್ವಿಂಟಾಲ್ ಇದ್ದು, ದಾಸ್ತಾನು 1.15 ಲಕ್ಷ ಕ್ವಿಂಟಾಲ್ ಇದೆ. ರಸಗೊಬ್ಬರ ಬೇಡಿಕೆ ಒಟ್ಟು 1277,815 ಇದ್ದು, ದಾಸ್ತಾನು 19,56,825 ರಷ್ಟು ಇದೆ ಎಂದು ತಿಳಿಸಿದರು.

ಈ ವರ್ಷ ಮುಂಗಾರು ಹಂಗಾಮಿನಲ್ಲಿ 2.10 ಕೋಟಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆಪ್ ಮೂಲಕ ಅಪ್ ಲೋಡ್ ಮಾಡಿಸುವ ಉದ್ದೇಶ ಕೃಷಿ ಇಲಾಖೆ ಹೊಂದಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ  ಟಾರ್ಪಾಲಿನ್ ವಿತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ ಅನ್ವಯ ಕೇಂದ್ರ ಸರ್ಕಾರದಿಂದ 55,07,256 ರೈತರಿಗೆ 7017.1520 ರೂ ನೆರವು, ರಾಜ್ಯ ಸರ್ಕಾರದಿಂದ 49,18,986 ರೈತರಿಗೆ 2849.1632 ರೂ ನೆರವು ನೀಡಲಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದರು.

Key words: Agriculture Minister- BC Patil -informed – food – production- sowing -seed surveying.