Friday, August 14, 2026

BDA Apartments

Home Front Page ಅಮೆಜಾನ್, ಟ್ವಿಟರ್ ಬಳಿಕ ಜೊಮ್ಯಾಟೊದಲ್ಲೂ ಶುರುವಾಯ್ತು ಉದ್ಯೋಗ ಕಡಿತ

ಅಮೆಜಾನ್, ಟ್ವಿಟರ್ ಬಳಿಕ ಜೊಮ್ಯಾಟೊದಲ್ಲೂ ಶುರುವಾಯ್ತು ಉದ್ಯೋಗ ಕಡಿತ

ಬೆಂಗಳೂರು, ನವೆಂಬರ್ 20, 2022 (www.justkannada.in): ಮೆಟಾ, ಅಮೆಜಾನ್, ಟ್ವಿಟರ್​ ಬಳಿಕ ಇದೀಗ ಜೊಮ್ಯಾಟೊದಲ್ಲೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಹೌದು. ಕಾರ್ಪೋರೇಟ್ ಸಂಸ್ಥೆಗಳಲ್ಲಿನ ಜಾಬ್​ಕಟ್​ ಟ್ರೆಂಡ್​ ಮತ್ತಷ್ಟು ಮುಂದುವರಿದಿದ್ದು, ಜೊಮ್ಯಾಟೊದಲ್ಲೂ ಸಿಬ್ಬಂದಿ ಕಡಿತ ಶುರುವಾಗಿದೆ.

ಸಂಸ್ಥೆಯ ವಿವಿಧ ವಿಭಾಗಗಳೂ ಸೇರಿದಂತೆ ಒಟ್ಟು ಶೇ. 3 ಉದ್ಯೋಗಿಗಳನ್ನು ತೆಗೆದುಹಾಕಲಿರುವುದಾಗಿ ಜೊಮ್ಯಾಟೊ ಹೇಳಿದೆ.

ಫುಡ್ ಡೆಲಿವರಿ ಆಯಪ್ ಆಗಿರುವ ಜೊಮ್ಯಾಟೊ ಕಂಪನಿಯ ನಿವ್ವಳ ಆದಾಯದಲ್ಲಿ 250.8 ಕೋಟಿ ರೂ. ನಷ್ಟ ಆಗಿರುವುದು ನ. 10ರಂದು ವರದಿಯಾಗಿತ್ತು.

ಕಳೆದ ಒಂದು ವರ್ಷದ ಅವಧಿಯಲ್ಲಿ ಕಂಪನಿಯ ನಷ್ಟ 434.9 ಕೋಟಿ ರೂ. ಆಗಿದೆ. ಅದಾಗ್ಯೂ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆದಾಯ 1,661.3 ಕೋಟಿ ರೂ.ಗೆ ಹೆಚ್ಚಳಗೊಂಡಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿತ್ತು.