Saturday, October 24, 2026

Dasara Wishes

Happy Dasara
Home Cinema ಜರ್ಮನ್ ಹುಡುಗನೊಂದಿಗೆ ಲವ್ವಲ್ಲಿ ಬಿದ್ದ ‘ಕಿರಿಕ್ ಬೆಡಗಿ’ ಸಂಯುಕ್ತಾ ?

ಜರ್ಮನ್ ಹುಡುಗನೊಂದಿಗೆ ಲವ್ವಲ್ಲಿ ಬಿದ್ದ ‘ಕಿರಿಕ್ ಬೆಡಗಿ’ ಸಂಯುಕ್ತಾ ?

ಬೆಂಗಳೂರು, ಜುಲೈ 01, 2019 (www.justkannada.in): ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಲವ್ವಲ್ಲಿ ಬಿದ್ದಿರುವ ಅನುಮಾನ ಮೂಡಿದೆ.

ಜರ್ಮನಿಯಲ್ಲಿ ಹುಡುಗನ ಜೊತೆ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಆತನ ಹೆಸರು ಕಿಸ್ಸಾವರ್. ವಿದೇಶಿ ಯುವಕ ಕ್ರಿಸ್ ಸಾವರ್ ಜತೆ ಜರ್ಮನಿಯಲ್ಲಿ ಸಂಯುಕ್ತಾ ಕೈ ಕೈ ಹಿಡಿದು ಓಡಾಡಿದ್ದಾರೆ.

ತಮ್ಮಿಬ್ಬರ ನಡುವಿನ ಸಂಬಂಧ ಯಾವ ರೀತಿಯದ್ದು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

ಗೆಳೆಯನನ್ನು ತಬ್ಬಿಕೊಂಡು ಕುಳಿತಿರುವ ಫೋಟೋ ಜತೆಯಲ್ಲಿ ‘ವೆನಿಲ್ಲಾ ಮತ್ತು ಚಾಕೋಲೇಟ್ ಜೋಡಿ ಯಾವಾಗಲೂ ಚೆನ್ನಾಗಿರುತ್ತದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ.