ನಟ ಪುನೀತ್ ರಾಜ್ ಕುಮಾರ್ ಜತೆಗಿನ ಒಡನಾಟ ನೆನೆದು ನಟಿ ರಮ್ಯಾ ಕಣ್ಣೀರು.

ಬೆಂಗಳೂರು,ಅಕ್ಟೋಬರ್,30,2021(www.justkannada.in):  ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳಿಗೆ ನಾಳೆವರೆಗೂ ಅವಕಾಶ ಮಾಡಿಕೊಡಲಾಗಿದ್ದು ಈ ಮಧ್ಯೆ ಗಣ್ಯರು, ರಾಜಕೀಯ ನಾಯಕರು, ಕಲಾವಿದರು, ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಈ ಮಧ್ಯೆ ನಟಿ ರಮ್ಯಾ ಸಹ  ಕಂಠೀರವ ಸ್ಟೇಡಿಯಂಗೆ ಆಗಮಿಸಿ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು. ಬಳಿಕ ನಟ ಅಪ್ಪು ಜತೆಗಿನ ಒಡನಾಟ ನೆನೆದು ಕಣ್ಣೀರು ಹಾಕಿದ ನಟಿ ರಮ್ಯ, ಪುನೀತ್ 3 ಸಿನಿಮಾಗಳಲ್ಲಿ ನಟಿಸಿದ್ಧರೆ ಪುನೀತ್ ಒಳ್ಳೆಯ ಸ್ನೇಹಿತರು. ಕಮ್ ಬ್ಯಾಕ್ ಮಾಡುವಂತೆ ನನಗೆ ಹೇಳುತ್ತಿದ್ದರು. ಆದರೆ ಈಗ ಅಪ್ಪು ಇಲ್ಲ ಎಂಬುದನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅವರ ಜತೆ ಕಳೆದ ದಿನಗಳನ್ನ ಎಂದೂ ಮರೆಯಲು ಆಗಲ್ಲ ಎಂದು ನುಡಿದರು.

ನಟ ಅರ್ಜುನ್ ಸರ್ಜಾ, ನಟ ರವಿಶಂಕರ್ ಸೇರಿ ಹಲವು ನಟರು ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿದ ನಟ ರವಿಶಂಕರ್, ನಟ ಅಪ್ಪು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ   ನಟ ಪುನೀತ್ ನಿಧನರಾಗಿದ್ದರಾಗಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತುಲ್ಲ.  ಅವರಿಗಿದ್ದ ಹೆಲ್ಪ್ ನೇಚರ್ ಬೇರೆ ಯಾರಿಗೂ ಇಲ್ಲ. ಯಾರೇ ಕಷ್ಟ ಹೇಳಿಕೊಂಡು ಬಂದರೂ ಸಹಾಯ ಮಾಡಿಯತ್ತಿದ್ದರು ಎಂದು ನೆನೆದರು.

Key words: Actress -Ramya – tears -remembering -her – actor -Puneet Raj Kumar.