ರಾಖಿ ಸಾವಂತ್’ಗೆ ಬಾಳ ಸಂಗಾರಿ ಸಿಕ್ಕಿದ್ದು ವಾಟ್ಸ್ ಆ್ಯಪ್’ನಲ್ಲಿ !

ಮುಂಬೈ, ಆಗಸ್ಟ್ 07, 2019 (www.justkannada.in): ರಾಖಿ ಸಾವಂತ್‌ ಗುಟ್ಟಾಗಿ ಮದುವೆಯಾಗಿದ್ದಾರಂತೆ!

ಸ್ವತಃ ರಾಖಿ ಸಾವಂತ್ ಇದನ್ನು ಖಚಿತಪಡಿಸಿದ್ದಾರೆ. ಎನ್‌ಆರ್‌ಐ ಜತೆ ಮದುವೆಯಾಗಿರುವುದಾಗಿ ರಾಖಿ ಹೇಳಿದ್ದಾರೆ.

ಬ್ರಿಟನ್‌ನಲ್ಲಿರುವ ಅನಿವಾಸಿ ಭಾರತೀಯ ರಿತೇಶ್‌ ಎಂಬುವವರ ಜತೆ ತೀರಾ ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ವೀಸಾ ದೊರೆತ ಕೂಡಲೇ ತಾನೂ ಬ್ರಿಟನ್‌ಗೆ ಹಾರುವುದಾಗಿ ಹೇಳಿದ್ದಾರೆ.

ಅಂದಹಾಗೆ ಇಬ್ಬರನ್ನೂ ಜೋಡಿ ಮಾಡಿದ್ದು ವಾಟ್ಸ್‌ ಆಯಪ್‌ ಅಂತೆ! ಇಬ್ಬರಲ್ಲಿ ಪ್ರೀತಿ ಅರಳಲು ಕಾರಣವಾದ ಪ್ರಸಂಗವನ್ನು ರಾಖಿ ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ.