ಬಿಕಾಂ ಬಿಡಲು ತೀರ್ಮಾನಿಸಿದ ಪ್ರಿಯಾ ವಾರಿಯರ್ !

ಬೆಂಗಳೂರು, ಜೂನ್ 15, 2019 (www.justkannada.in): ಪ್ರಿಯಾ ಪ್ರಕಾಶ್ ವಾರಿಯರ್ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಿಯಾ ಕಾಲೇಜ್ ಗೆ ಹೋಗಬೇಕಾ ಅಥವಾ ಸಿನಿಮಾದಲ್ಲೆ ಮುಂದುವರೆಯ ಬೇಕಾ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾರೆ.

ಸದ್ಯ ಬಿ ಕಾಂ ಎರಡನೆ ವರ್ಷದಲ್ಲಿ ಓದುತ್ತಿದ್ದಾರೆ. ಈಗಾಗಲೆ ತರಗತಿಗೆ ಚಕ್ಕರ್ ಹಾಕುತ್ತಿರುವ ಪ್ರಿಯಾಗೆ ಓದು ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ಕಷ್ಟವಾಗುತ್ತಿದೆಯಂತೆ. ಹಾಗಾಗಿ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಸಿನಿಮಾದಲ್ಲೆ ತೊಡಗಿಕೊಳ್ಳುವ ನಿರ್ಧಾರ ಮಾಡಿದ್ದಾರಂತೆ.