ಲಾಕ್ ಡೌನ್ ಸಮಯ ಸದ್ವಿನಿಯೋಗ: ಅನಿಮೇಷನ್ ಕಲಿಯುತ್ತಿರುವ ಮಾನ್ವಿತಾ

ಬೆಂಗಳೂರು, ಆಗಸ್ಟ್ 10, 2020 (www.justkannada.in): ಲಾಕ್ ಡೌನ್ ಸಮಯವನ್ನೂ ಸದ್ವಿನಿಯೋಗ ಮಾಡಿಕೊಳ್ಳಲು ಹೊರಟಿರುವ ನಟಿ ಮಾನ್ವಿತಾ ಅನಿಮೇಷನ್ ಜಗತ್ತಿಗೆ ಕಾಲಿಟ್ಟಿದ್ದು, ಕಥೆ ಬರೆಯುತ್ತಿದ್ದಾರೆ.

ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನ್ವಿತಾ ಇದನ್ನು ಪ್ಯಾಶನ್ ಆಗಿ ಮಾಡುತ್ತಿದ್ದಾರೆ.ಮಾನೇಕಿನ್ ಸ್ಟುಡಿಯೋ ಹೊಸ ಸಾಹಸವಾಗಿದೆ.

ಅನಿಮೇಷನ್ ಮತ್ತು ನೇರ ಕ್ರಿಯಾ ಚಿತ್ರ ನಿರ್ಮಾಣ ನಡುವಣ ಅಂತರವನ್ನು ಸರಾಗವಾಗಿ ತುಂಬಲಿದೆ. ಹೆಚ್ಚಿನ ಗುಣಮಟ್ಟದ ಅಂಶಗಳ ಸೃಷಿಗೂ ನೆರವಾಗಲಿದೆ ಎಂದು ಮಾನ್ವಿತಾ ಹೇಳಿದ್ದಾರೆ.