ವಿಶ್ವಸಂಸ್ಥೆಯ `ಎಸ್ ಡಿಜಿ’ ಅಭಿಯಾನಕ್ಕೆ ದಿಯಾ ಮಿರ್ಜಾ ರಾಯಭಾರಿ

ನವದೆಹಲಿ, ಮೇ 11, 2019 (www.justkannada.in): ವಿಶ್ವಸಂಸ್ಥೆಯ ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಅಭಿಯಾನಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಜಾ, ಇ-ಕಾಮರ್ಸ್ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಪೆಂಗ್ ಲೀ, ಬ್ರಿಟಿಷ್ ನಟಿ ರಿಚರ್ಡ್ ಕರ್ಟಿಸ್ ಸೇರಿ 17 ಖ್ಯಾತನಾಮರನ್ನು ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.

ವಿಶ್ವಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಅವರು ರಾಯಭಾರಿಗಳ ನೇಮಕ ಆದೇಶಕ್ಕೆ ಸಹಿಹಾಕಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಕಚೇರಿ ತಿಳಿಸಿದೆ.

ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಪ್ಯಾರಿಸ್ ಒಪ್ಪಂದದಲ್ಲಿ ಸುಸ್ಥಿರ ಅಭಿವೃದ್ಧಿಗೆ ನಿಗದಿಪಡಿಸಿರುವ ಗುರಿಗಳ ಸಾಧನೆಗೆ ರಾಷ್ಟ್ರಗಳನ್ನು ಪೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ. ವಿಶ್ವಸಂಸ್ಥೆಯ ಗೌರವಕ್ಕೆ ಅಭಾರಿಯಾಗಿದ್ದು, ಅಭಿಯಾನಕ್ಕೆ ತಕ್ಕ ನ್ಯಾಯ ಒದಗಿಸುವೆ ಎಂದು ದಿಯಾ ಮಿರ್ಜಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.