Tuesday, September 22, 2026

BDA Apartments

ಚಿರಂಜೀವಿ ಸರ್ಜಾ ಕುಜ ದೋಷದ ಬಗ್ಗೆ ಮಾತನಾಡಿದ ನಟ ಜಗ್ಗೇಶ್ BDA JK_Adv BDA Adv
Home Cinema ಚಿರಂಜೀವಿ ಸರ್ಜಾ ಕುಜ ದೋಷದ ಬಗ್ಗೆ ಮಾತನಾಡಿದ ನಟ ಜಗ್ಗೇಶ್

ಚಿರಂಜೀವಿ ಸರ್ಜಾ ಕುಜ ದೋಷದ ಬಗ್ಗೆ ಮಾತನಾಡಿದ ನಟ ಜಗ್ಗೇಶ್

ಬೆಂಗಳೂರು, ಜೂನ್ 08, 2020 (www.justkannada.in): ಚಿರಂಜೀವಿ ಸರ್ಜಾ ಜಾತಕದಲ್ಲಿದ್ದ ದೋಷದ ಬಗ್ಗೆ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ.

ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಲು ಜಾತಕ ದೋಷವೇ ಕಾರಣವಾಯಿತೇ? ಎಂಬ ಪ್ರಶ್ನೆ ಮೂಡಿದೆ. ಚಿರು ಜಾತಕ ನೋಡಿದ್ದ ಜ್ಯೋತಿಷಿಗಳು ಅಷ್ಟಮ ಕುಜ ದೋಷವಿದೆ. ಅದಕ್ಕೆ ಕೆಲವು ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರಿಯಿರಿ ಎಂದಿದ್ದರಂತೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಚಿರು ಸರ್ಜಾ ಮದುವೆ ಸಂದರ್ಭದಲ್ಲಿ ಮೇಘನಾ ಮತ್ತು ಚಿರು ಜಾತಕವನ್ನು ತಮ್ಮ ಪರಿಚಯದ ಜ್ಯೋತಿಷಿಗಳ ಬಳಿ ತೋರಿಸಲು ಸುಂದರ್ ರಾಜ್ ದಂಪತಿಗಳ ಜತೆ ಜಗ್ಗೇಶ್ ಹೋಗಿದ್ದರಂತೆ. ಆ ವೇಳೆ ಈ ವಿಷಯ ಗೊತ್ತಾಗಿತ್ತು ಎಂದು ಜಗ್ಗೇಶ್ ಮಾಹಿತಿ ನೀಡಿದ್ದಾರೆ.

ಜ್ಯೋತಿಷಿ ಹೇಳಿದ ಪೂಜೆಯನ್ನು ಅವರು ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಜಗ್ಗೇಶ್ ತಿಳಿಸಿದ್ದಾರೆ. ಅಂದಹಾಗೆ ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರು ಕುಜ ದೋಷವಿದ್ದರೆ ಪತಿ-ಪತ್ನಿ ಜತೆಯಾಗಿ ಬಾಳುವ ಯೋಗವಿಲ್ಲ ಎಂದು ನಂಬುತ್ತಾರೆ.