ನಟಿ ಹಾಗೂ ಬಿಜೆಪಿ ನಾಯಕಿ  ಖುಷ್ಬೂ ಬಂಧನ…

ಚೆನ್ನೈ,ಅಕ್ಟೋಬರ್,27,2020(www.justkannada.in): ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ  ಸೇರಿದ್ಧ ನಟಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಮಹಿಳೆಯರ ಪರ ಪ್ರತಿಭಟನೆಗೆ ತೆರಳುತ್ತಿದ್ದ ವೇಳೆ ಚೆನ್ನೈನಲ್ಲಿ ಪೊಲೀಸರು ನಟಿ ಖುಷ್ಬೂ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ  ವಿಸಿಕೆ ನಾಯಕ ತಿರುಮಾಳವನ್ ಬಂಧನಕ್ಕೆ ಆಗ್ರಹಿಸಿ ಚಿದಂಬರಂನಲ್ಲಿ ಪ್ರತಿಭಟನೆ ಬಿಜೆಪಿ ಆಯೋಜಿಸಿತ್ತು.actress-bjp-leader-khushboo-arrested-chennai-police

ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ  ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ನಟಿ ಖುಷ್ಬೂ ಸೇರಿದಂತೆ ಹಲವು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Actress -BJP –leader- Khushboo –arrested-chennai-police