ನವೆಂಬರ್ 27ರಂದು ಹಸೆಮಣೆ ಏರಲಿದ್ದಾರೆ ನಟಿ ಅದಿತಿ ಪ್ರಭುದೇವ

ಬೆಂಗಳೂರು, ನವೆಂಬರ್ 04, 2022 (www.justkannada.in): ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ-ಯಶಸ್ ನವೆಬರ್ 27 ಕ್ಕೆ ಮದುವೆಯಾಗುತ್ತಿದ್ದಾರೆ.

ಹೌದು. ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮದುವೆ ದಿನಾಂಕ ನಿಗದಿಯಾಗಿದೆ. ಮನೆಯವರೇ ನೋಡಿ ನಿಶ್ಚಯಿಸಿದ ಹುಡುಗನ ಜೊತೆ ಅದಿತಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕಳೆದ ವರ್ಷ ಅದಿತಿ ಉದ್ಯಮಿ ಯಶಸ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಹುಡುಗನನ್ನು ಪರಿಚಯಿಸಿದ್ದರು.

ಮದುವೆ ಆಮಂತ್ರಣ ಪತ್ರಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂತೂ ಕನ್ನಡದ ಅಪ್ಪಟ ಪ್ರತಿಭಾವಂತ ನಟಿ ಈಗ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ.