Monday, August 31, 2026

BDA Apartments

Home Cinema ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು

ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು

ಮೈಸೂರು, ಸೆಪ್ಟೆಂಬರ್, 03, 2020(www.justkannada.in) ; ಅಭಿನಯಚಕ್ರವರ್ತಿ ಎಂದು ಖ್ಯಾತಿಪಡೆದುಕೊಂಡಿರುವ ನಟ ಕಿಚ್ಚ ಸುದೀಪ್ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.

 

ಸೆಪ್ಟೆಂಬರ್ 2ರಂದು ಬುಧವಾರ 48ನೇ ಜನುಮದಿನ ಆಚರಿಸಿಕೊಂಡ ಅವರು, ಗುರುವಾರ ಬೆಳಗ್ಗೆಯೇ ಮೈಸೂರಿಗೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.

Actor-Kichcha-Sudeep-visited-Chamundi-Hill-offered-special- worship

ಸೆಲ್ಫಿಗಾಗಿ ಅಭಿಮಾನಿಗಳ ಪರದಾಟ : ಚಾಮುಂಡಿಬೆಟ್ಟಕ್ಕೆ ಕಿಚ್ಚ ಸುದೀಪ್ ಆಗಮಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ದಂಡು ದೇವಾಲಯ ಎದುರು ನೆರೆದಿತ್ತು. ನಟ ಸುದೀಪ್ ದೇವಸ್ಥಾನದಿಂದ ಹೊರಬರುತ್ತಿದ್ದ ಹಾಗೆಯೇ, ಅಭಿಮಾನಿಗಳು ಸೆಲ್ಫಿಗೆ ಪರದಾಡಿದರು. ಈ ನಡುವೆಯೂ ಕಿಚ್ಚ ಸುದೀಪ್ ತಮ್ಮ ಬೆಂಬಲಿಗರ ಸಹಾಯದಿಂದ ಕಾರ ಬಳಿ ತೆರಳಿ ಎಲ್ಲೆರೆಡೆಗೆ ಕೈ ಬೀಸಿ ಸಂತಸವ್ಯಕ್ತಪಡಿಸಿ ಕಾರಿನಲ್ಲಿ ತೆರಳಿದರು.

key words ; Actor-Kichcha-Sudeep-visited-Chamundi-Hill-offered-special- worship