ಪೊಲ್ಯಾಂಡ್’ನಲ್ಲಿ ಕಿಚ್ಚ ಸುದೀಪ್ ಚೇಸಿಂಗ್ !

ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in):
ಕಿಚ್ಚ ಸುದೀಪ್ ಕೋಟಿಗೊಬ್ಬ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕೋಟಿಗೊಬ್ಬ-2 ಚಿತ್ರದ ಸೀಕ್ವೇಲ್ ಆಗಿರೋ ಕೋಟಿಗೊಬ್ಬ-3 ಶೂಟಿಂಗ್ ಸದ್ಯ ಪೋಲಾಂಡ್ ನಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್ ಕೋಟಿಗೊಬ್ಬ -3 ಶೂಟಿಂಗ್ ಪೋಲಾಂಡ್ ನ ವಾರ್ಸಾಗೆ ತೆರಳಿದ್ದರು.

ಈಗಾಗ್ಲೇ ಸಿನಿಮಾದ ಫಸ್ಟ್ ಪಾರ್ಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈಗ ಚೇಸಿಂಗ್ ಶೂಟಿಂಗ್ ಸೀನ್ಸ್ ನಡೆಯುತ್ತಿದೆ. ಸದ್ಯ ಪೋಲಾಂಡ್ ನ ಕೆಲ ಶೂಟಿಂಗ್ ಸೆಟ್ ಫೋಟೋಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.