Saturday, September 26, 2026

BDA Apartments

ಟ್ವೀಟ್ ಎಡವಟ್ಟಿಗೆ ಬಹಿರಂಗವಾಗಿ ಸೈನಾ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್ BDA JK_Adv ...
Home Cinema ಟ್ವೀಟ್ ಎಡವಟ್ಟಿಗೆ ಬಹಿರಂಗವಾಗಿ ಸೈನಾ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್

ಟ್ವೀಟ್ ಎಡವಟ್ಟಿಗೆ ಬಹಿರಂಗವಾಗಿ ಸೈನಾ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್

ಬೆಂಗಳೂರು, ಜನವರಿ 12, 2022 (www.justkannada.in): ನಟ ಸಿದ್ಧಾರ್ಥ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ ಪತ್ರ ಮುಖೇನ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ಸಿದ್ಧಾರ್ಥ್ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡುವಾಗ ಕೀಳು ಮಟ್ಟದ ಕಾಮೆಂಟ್ ಮಾಡಿ ಟೀಕೆಗೊಳಗಾಗಿದ್ದರು. ಈ ವಿಷಯಕ್ಕಾಗಿ ಸೈನಾ ನೆಹ್ವಾಲ್ ಗೆ ಪತ್ರ ಮುಖೇನ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

‘ಡಿಯರ್ ಸೈನಾ, ನನ್ನ ಜೋಕ್ ಬಗ್ಗೆ ಕ್ಷಮೆ ಯಾಚಿಸುತ್ತೇನೆ. ಕೆಲವು ದಿನಗಳ ಹಿಂದೆ ನೀವು ಮಾಡಿದ ಟ್ವೀಟ್ ನನಗೆ ಕೋಪ ತರಿಸಿರಬಹುದು. ಆದರೆ ಅದಕ್ಕೆ ನಾನು ಪ್ರತಿಕ್ರಿಯಿಸಿದ ರೀತಿಯಿಂದ ನಿಮಗೆ ಬೇಸರವಾಗಿದ್ದರಿಂದ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

ಈ ಪತ್ರದ ಮೂಲಕ ಕ್ಷಮೆ ಸ್ವೀಕರಿಸಿ. ನೀವು ಯಾವತ್ತೂ ನನ್ನ ಪಾಲಿಗೆ ಚಾಂಪಿಯನ್’ ಎಂದು ಸಿದ್ಧಾರ್ಥ್ ಸುದೀರ್ಘವಾಗಿ ಪತ್ರ ಬರೆದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.